‘ ಅದನ್ನು ಮಾಧ್ಯಮದ ಮುಂದೆ ಹೇಳ್ತಿಯಾ..? ಹೋಗಿ ಎಸ್‌ಐಟಿ ಮುಂದೆ ಹೇಳಪ್ಪ’ : ರೋಷಾಗ್ನಿಗೆ ತುಪ್ಪ ಸುರಿದ ಸಿದ್ದು.

Promotion

 

ಮೈಸೂರು, ಜೂ.13, 2019 : (www.justkannada.in news) ಐಎಂಎ ವಿಚಾರದಲ್ಲಿ ನನ್ನನ್ನು ಸಿಲುಕಿಸಿದ್ದಾರೆ ಎಂಬ ರೋಷನ್ ಬೇಗ್ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
‘ ಅದನ್ನು ಮಾಧ್ಯಮದ ಮುಂದೆ ಹೇಳ್ತಿಯಾ..? ಹೋಗಿ ಎಸ್‌ಐಟಿ ಮುಂದೆ ಹೇಳಪ್ಪ’ ಎಂದು ಮೈಸೂರಿನಲ್ಲಿ ಮಾಧ್ಯಮದವರಿಗೆ ಹೇಳುವ ಮೂಲಕ ರೋಷನ್ ಬೇಗ್‌ಗೆ ತಿರುಗೇಟು ಕೊಟ್ಟರು.
ಐಎಂಎ ವಿಚಾರದಲ್ಲಿ ಎಸ್.ಐ.ಟಿ ರಚನೆ ಆಗಿದೆ. ಎಸ್.ಐ.ಟಿ ಸಂಪೂರ್ಣವಾಗಿ ತನಿಖೆ ನಡೆಸಲಿದೆ. ಆ ಬಗ್ಗೆ ನಾನು ಸಾರ್ವಜನಿಕವಾಗಿ ಮಾತನಾಡೋಲ್ಲ‌..
ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ..
ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಿದ್ದು ಪ್ರತಿಕ್ರಿಯೆಗೆ ನಕಾರ. ಸಚಿವ ಸಂಪುಟ ವಿಸ್ತರಣೆ ಮಾಡಿಕೊಳ್ಳುತ್ತಾರೆ. ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಲೆ ಹೊರಟ ಸಿದ್ದರಾಮಯ್ಯ.

key words : siddaramaiah-roshan-beaigh-mysore-ima-police-sit