ಪಿಎಫ್ ಐ ಮತ್ತು ಎಸ್ ಡಿಪಿಐ ಬೆಳೆಯಲು ಸಿದ್ಧರಾಮಯ್ಯ ಕಾರಣ- ನಳೀನ್ ಕುಮಾರ್ ಕಟೀಲ್ ಆರೋಪ.

Promotion

ವಿಜಯಪುರ,ಸೆಪ್ಟಂಬರ್,27,2022(www.justkannada.in): ಪಿಎಫ್ ಐ ಮತ್ತು ಎಸ್ ಡಿಪಿಐ ಬೆಳೆಯಲು ಸಿದ್ಧರಾಮಯ್ಯ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ  ನಳೀನ್ ಕುಮಾರ್ ಕಟೀಲ್ ಆರೋಪ ಮಾಡಿದ್ದಾರೆ.

ವಿಜಯಪುರದಲ್ಲಿ ಇಂದು ಮಾತನಾಡಿದ ನಳೀನ್ ಕುಮಾರ್ ಕಟೀಲ್,  ಸಿದ್ದರಾಮಯ್ಯ  ಅವರ ಕಾಲದಲ್ಲಿ ಈ ಸಂಘಟನೆಗಳು ಬೆಳೆದಿವೆ. ಸಿದ್ದರಾಮಯ್ಯರಿಂದಲೇ ಇಂತಹ ಪರಿಸ್ಥಿತಿ ಬಂದಿದೆ. ನಮ್ಮ ಸರ್ಕಾರ ಗಟ್ಟಿ ನಿರ್ಧಾರ ತೆಗೆದುಕೊಂಡಿದೆ. ದೇಶಾದ್ಯಂತ ಎನ್ ಐಎ ದಾಳಿ ಮಾಡಿದೆ.  ಪಿಫ್ ಐ ನಿಷೇಧಕ್ಕೆ ಸಾಕ್ಷಿ ಸಂಗ್ರಹ ಕಾರ್ಯ ನಡೆಯುತ್ತಿದೆ.  ದೇಶಭಕ್ತರು ಪಿಎಫ್ ಐ ನಿಷೇಧಕ್ಕೆ ಆಗ್ರಹಿಸಿದ್ದಾರೆ  ಎಂದರು.

ಪೇ ಸಿಎಂ ಅಭಿಯಾನ ವಿರುದ್ಧ ಕಿಡಿಕಾರಿದ ನಳೀನ್ ಕುಮಾರ್ ಕಟೀಲ್, ಸೋನಿಯಾಗಾಂಧಿ ಮೇಡಂಗೆ ಪೇಮೆಂಟ್ ಮಾಡಿ ಸಿದ್ಧರಾಮಯ್ಯ ಸಿಎಂ ಸೀಟು ಉಳಿಸಿಕೊಂಡರು. ಇದೀಗ ಸಿದ್ಧರಾಮಯ್ಯರನ್ನ ಹೊಡೆಯಲು ಡಿಕೆ ಶಿವಕುಮಾರ್ ಪೇ ಸಿಎಂ ಅಸ್ತ್ರ ಪ್ರಯೋಗಿಸಿದ್ದಾರೆ.  ನಮ್ಮ ಬಾಯಲ್ಲಿ ಹೇಳಿಸಲು ಡಿಕೆಶಿ ಪ್ಲಾನ್ ಮಾಡಿದ್ದಾರೆ ಎಂದು ಲೇವಡಿ ಮಾಡಿದರು.

Key words: Siddaramaiah -responsible – PFI – SDPI-Naleen Kumar Kateel