ಬೆಂಗಳೂರಿನಲ್ಲಿ ಸುಮಾರು 7 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ: ನಾಲ್ವರ ಬಂಧನ.

ಬೆಂಗಳೂರು,ಸೆಪ್ಟಂಬರ್,27,2022(www.justkannada.in): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ 7 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದು ನಾಲ್ವರನ್ನ ಬಂಧಿಸಿದ್ದಾರೆ.

ನಾಲ್ವರು ಮಹಿಳೆ ಸೇರಿ ಓರ್ವ ವಿದೇಶಿ ಪ್ರಜೆಯನ್ನ ಬಂಧಿಸಲಾಗಿದೆ. ಬಂಧಿತರಿಂದ 7 ಕೋಟಿ 80 ಲಕ್ಷ ಮೌಲ್ಯದ ಡ್ರಗ್ಸ್   ವಶಕ್ಕೆ ಪಡೆಯಲಾಗಿದೆ. 1ಕೆಜಿ ಎಂಡಿಎಂಎ  8 ಹ್ಯಾಶಿಸ್ ಆಯಲ್ 10 ಕೆಜಿ ಗಾಂಜಾವನ್ನ ಪೊಲೀಸರು ಜಪ್ತಿ ಮಾಡಿದ್ದಾರೆ.

ಜೂನ್ 24 ರಂದು ಡಿಜೆಯೊಬ್ಬನನ್ನ ವಿವೇಕನಗರ ಪೊಲೀಸರು ಬಂಧಿಸಿದ್ದರು.  ಬಳಿಕ ಡ್ರಗ್ಸ್ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿತ್ತು.  ಆಂಧ್ರದ ಚಿಂತಪಲ್ಲಿಯಿಂದ ಬೆಂಗಳೂರಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದರು. ರೈಲಿನಲ್ಲಿ ಬಂದು ಪೆಡ್ಲರ್ ಗಳಿಗೆ  ಡ್ರಗ್ಸ್ ಪೂರೈಕೆ ಮಾಡುತ್ತಿದ್ದರು ಎನ್ನಲಾಗಿದೆ.

Key words: Drugs -worth  -7 crore- seized –Bengaluru