ಕುರುಬ ಸಮಾವೇಶದಲ್ಲಿ ಸಿದ್ಧರಾಮಯ್ಯ ಮುಂದಿನ ಸಿಎಂ ಕೂಗು:  ಕೆಲ ಮುಖಂಡರಿಂದ ವಿರೋಧ, ಗದ್ದಲ.

Promotion

ಕೊಪ್ಪಳ,ಫೆಬ್ರವರಿ,18,2023(www.justkannada.in): ಕೊಪ್ಪಳ ಜಿಲ್ಲೆ ಯಲ್ಬುರ್ಗದಲ್ಲಿ ನಡೆದ ಕುರುಬಸಮಾವೇಶದಲ್ಲಿ ಸಿದ್ಧರಾಮಯ್ಯ ಮುಂದಿನ ಸಿಎಂ ಕೂಗು ಮಾರ್ದನಿಸಿದ್ದು, ಈ ವೇಳೆ ಈ ಹೇಳಿಕೆಗೆ ಸಮುದಾಯದ ಕೆಲ ಮುಖಂಡರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಗದ್ದಲ ಉಂಟಾಯಿತು.

ಯಲ್ಬುರ್ಗದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯುತ್ತಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಭೈರತಿ ಸುರೇಶ್ , ಸಿದ್ಧರಾಮಯ್ಯ ಮುಂದಿನ ಸಿಎಂ ಆಗಬೇಕು ಎಂದಿದ್ದಾರೆ. ಈ ವೇಳೆ ಕುರುಬ ಸಮುದಾಯದ ಕೆಲ ಮುಖಂಡರು ಭೈರತಿ ಸುರೇಶ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದು ಗದ್ದಲ ನೂಕಾಟ ತಳ್ಳಾಟ ನಡೆದಿದೆ. ಸಿದ್ಧರಾಮಯ್ಯ ಸಮ್ಮುಖದಲ್ಲೇ ಇದು ನಡೆದಿದೆ ಎನ್ನಲಾಗಿದೆ.

ಜಾತ್ರೆ ರಾಯಣ್ಣ ಮೂರ್ತಿಗೆ ಪಕ್ಷಾತೀತವಾಗಿ ದೇಣಿಗೆ ನೀಡಿದ್ದಾರೆ. ಕೇವಲ ಸಿದ್ದರಾಮಯ್ಯ ಒಬ್ಬರನ್ನೇ ಹೊಗಳಬೇಡಿ ಎಂದು ಕೆಲಮುಖಂಡರು ಹೇಳಿದ್ದಾರೆ. ಈ ವೇಳೆ ಮಾತನಾಡಿದ ಭೈರತ ಸುರೇಶ್ ಸಿದ್ದುನ್ ಹೊಗಳುತ್ತೇನೆ  ಏಣು ಬೇಕಾದರೂ ಮಾಡಿಕೊಳ್ಳಿ ಎಂದ ಭೈರತಿ ಸುರೇಶ್.  ನಾನು ಸಿದ್ದರಾಮಯ್ಯ ಪರ ಮಾತನಾಡುತ್ತೇನೆ ಸಿದ್ದರಾಮಯ್ಯನವರೇ ಈ ರಾಜ್ಯದ ಸಿಎಂ ಆಗಬೇಕು. ನಾಲ್ಕು ಜನ ವಿರೋಧ ಮಾಡಿದರೇ ಏನೂ ಆಗಲ್ಲ ಎಂದರು.  ಈ ವೇಳೆ ಸಿದ್ದರಾಮಯ್ಯ ಪರ ನೆರೆದಿದ್ದ ಜನರು ಶಿಳ್ಳೇ ಚಪ್ಪಾಳೆ ಹೊಡೆದರು

ಈ ಕುರಿತು ಮಾತನಾಡಿದ ಮಾಜಿ ಸಚಿವ ಬಸವರಾಜ ರಾಯರೆಡ್ಡಿ, ಸಿದ್ಧರಾಮಯ್ಯ ಮತ್ತೆ ಸಿಎಂ ಆಗಬೇಕು. ಸಿದ್ಧರಾಮಯ್ಯ ಮತ್ತೆ ಸಿಎಂ ಆದರೆ ಒಳ್ಳೆಯದು. ಅಭಿವೃದ್ದಿಗಾಗಿ ಸಿದ್ಧರಾಮಯ್ಯ ಸಿಎಂ ಆಗಬೇಕು. ಸಿದ್ದರಾಮಯ್ಯ. ಎಲ್ಲಾ ಸಮುದಾಯದ ನಾಯಕ  ಇಂಥವರು ಮತ್ತೆ ಸಿಎಂ ಆದರೆ ಒಳ್ಳೇಯದು ಎಂದರು.

Key words: Siddaramaiah- next CM – Kuruba –convention-Opposition -some leaders