ಕಿವಿಗೆ ಹೂವು ಹಾಕಿಕೊಂಡಿದ್ದು ಕಾಂಗ್ರೆಸ್ಸಿಗರ ದಿವಾಳಿತನ ತೋರಿಸುತ್ತದೆ- ಸಚಿವ ಸುಧಾಕರ್ ವಾಗ್ದಾಳಿ

kannada t-shirts

ಚಿಕ್ಕಬಳ್ಳಾಪುರ,ಫೆಬ್ರವರಿ,18,2023(www.justkannada.in):  ಬಜೆಟ್ ಮಂಡನೆ ವೇಳೆ ಕಾಂಗ್ರೆಸ್ಸಿಗರು ಕಿವಿಗೆ ಹೂವು ಹಾಕಿಕೊಂಡಿದ್ದು  ಅವರ ದಿವಾಳಿತನ ತೋರಿಸುತ್ತದೆ. 75 ವರ್ಷಗಳ ರಾಜಕೀಯದಲ್ಲಿ ಯಾರೂ ಈ ರೀತಿ ಮಾಡಿರಲಿಲ್ಲ. ಬಜೆಟ್​​ಗೆ ಅಪಹಾಸ್ಯ ಮಾಡಿದ ಕುಖ್ಯಾತಿಗೆ ಕಾಂಗ್ರೆಸ್ಸಿಗರು ಗುರಿಯಾಗಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಾಗ್ದಾಳಿ ನಡೆಸಿದರು.

ಚಿಕ್ಕಬಳ್ಳಾಪುರದಲ್ಲಿ ಇಂದು ಮಾತನಾಡಿದ ಸಚಿವ ಸುಧಾಕರ್, ತಮ್ಮ  ಅವಧಿಯಲ್ಲಿ ಶೇ.99ರಷ್ಟು ಬಜೆಟ್ ಅನುಷ್ಠಾನ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಸಿದ್ದರಾಮಯ್ಯ ಅವಧಿಯಲ್ಲಿ ಶೇ.39ರಷ್ಟು ಮಾತ್ರ ಬಜೆಟ್​ ಅನುಷ್ಠಾನವಾಗಿದೆ ಅಷ್ಟೆ ಎಂದು ಟೀಕಿಸಿದರು.

ಇನ್ನು ಬಜೆಟ್​ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಚಿಕ್ಕಬಳ್ಳಾಫುರ ಜಿಲ್ಲೆಗೆ ಭರಪೂರ ಕೊಡುಗೆ ನೀಡಿದ್ದಾರೆ. ಈ ಬಾರಿ ಬಜೆಟ್​ನಲ್ಲಿ ಜಿಲ್ಲೆಗೆ ನಿರೀಕ್ಷೆಗೂ ಮೀರಿ ಅನುದಾನ ಘೋಷಣೆಯಾಗಿದೆ. ಹೆಚ್​.ಎನ್​​.ವ್ಯಾಲಿ 3ನೇ ಹಂತದ ಶುದ್ಧೀಕರಣ, ಎತ್ತಿನಹೊಳೆ ಯೋಜನೆ, ಹೂವಿನ ಮಾರುಕಟ್ಟೆ, ದ್ರಾಕ್ಷಿ ರಸ ಉತ್ಪಾದನಾ ಘಟಕ, ಹೈಟೆಕ್ ರೇಷ್ಮೆ ಘಟಕ, ನಂದಿಗಿರಿಧಾಮ ರೂಪ್​ವೇ ನಿರ್ಮಾಣ ಸೇರಿ ಹಲವು ಯೋಜನೆ ಘೋಷಣೆಯಾಗಿದೆ. ಹೀಗಾಗಿ ಸಿಎಂ ಬಸವರಾಜ ಬೊಮ್ಮಾಯಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಸಚಿವ ಸುಧಾಕರ್ ತಿಳಿಸಿದರು.

Key words: flowers – ears – Congress – Minister -Sudhakar

website developers in mysore