ಅರ್ಕಾವತಿ ಬಡಾವಣೆ ಪ್ರಕರಣದಲ್ಲಿ ಸಿದ್ಧರಾಮಯ್ಯ ಜೈಲು ಸೇರುತ್ತಾರೆ- ನಳೀನ್ ಕುಮಾರ್ ಕಟೀಲ್.

Promotion

ಬಾಗಲಕೋಟೆ,ಸೆಪ್ಟಂಬರ್,26,2022(www.justkannada.in): ರಾಜ್ಯ ಸರ್ಕಾರದ ವಿರುದ್ಧ ಪೇ ಸಿಎಂ ಅಭಿಯಾನ ಸಾಲು ಸಾಲು ಆರೋಪ ಮಾಡುತ್ತಿರುವ  ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.

ಬಾಗಲಕೋಟೆಯಲ್ಲಿ ಇಂದು ಮಾತನಾಡಿದ ನಳೀನ್ ಕುಮಾರ್ ಕಟೀಲ್,  ಅರ್ಕಾವತಿ ಬಡಾವಣೆ ಪ್ರಕರಣದಲ್ಲಿ ಸಿದ್ಧರಾಮಯ್ಯ ಜೈಲು ಸೇರುತ್ತಾರೆ. ಕಾಂಗ್ರೆ ಸ್ ಅಧಿಕಾರಕ್ಕೆ  ಬಂದಾಗ ಸಾಕಷ್ಟು ಭ್ರಷ್ಟಾಚಾರ ಮಾಡಿದೆ. ಅರ್ಕಾವತಿ ಹಗರಣದ ತನಿಖೆಯನ್ನ ನಾವು ಪೂರ್ಣಗೊಳಿಸುತ್ತೇವೆ. ಅರ್ಕಾವತಿ ಕೇಸ್​ನಲ್ಲಿ ಯಾರೆಲ್ಲ ಇರ್ತಾರೋ ಅವರು ಜೈಲಿಗೆ ಹೋಗ್ತಾರೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಸಾಕಷ್ಟು ಭ್ರಷ್ಟಾಚಾರ ಮಾಡಿದೆ. ಅರ್ಕಾವತಿ ಮಾತ್ರವಲ್ಲ, ಹಾಸ್ಟೆಲ್​ ದಿಂಬು, ಹಾಸಿಗೆಯಲ್ಲೂ ಅಕ್ರಮ ಮಾಡಿದೆ . ಕಾಂಗ್ರೆಸ್ ಹಗರಣ ಬಗ್ಗೆ ಯಾಕೆ ತನಿಖೆ ಮಾಡಿಲ್ಲ. ಸಿದ್ದರಾಮಯ್ಯ ಅವಧಿಯ ಹಗರಣಗಳ ದಾಖಲೆ ಮುಚ್ಚಿಟ್ಟಿದ್ದಾರೆ. ದಾಖಲೆಗಳನ್ನು ಹುಡುಕಲು ನಮಗೆ ತುಂಬಾ ಕಷ್ಟವಾಗಿದೆ  ಎಂದು ನಳೀನ್ ಕುಮಾರ್ ಕಟೀಲ್ ಹೇಳಿದರು.

Key words: Siddaramaiah – jail – Arkavati badavane-case-Naleen Kumar Kateel.