ಬಿಎಸ್ ವೈ ಆಪ್ತರ ಮೇಲೆ ಐಟಿ ದಾಳಿಗೆ ಸಿದ್ದರಾಮಯ್ಯ ಕಾರಣ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೊಸ ಬಾಂಬ್.

Promotion

ಬೆಂಗಳೂರು,ಅಕ್ಟೋಬರ್,12,2021(www.justkannada.in): ಬಿ.ಎಸ್ ಯಡಿಯೂರಪ್ಪ ಆಪ್ತರ ಮೇಲೆ ಐಟಿ ದಾಳಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಣ ಎಂದು ಹೇಳುವ ಮೂಲಕ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೊಸಬಾಂಬ್ ಸಿಡಿಸಿದ್ದಾರೆ.

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೆ ಐಟಿ ರೇಡ್‌ ಗೆ ಕಾರಣ. ಸಿದ್ದರಾಮಯ್ಯ ಪವರ್‌ ಗಾಗಿ ಏನು ಬೇಕಾದರೂ ಮಾಡುತ್ತಾರೆ. ಬಿಎಸ್  ಯಡಿಯೂರಪ್ಪ ಭೇಟಿ ಸಹ ಅದರ ಭಾಗವಾಗಿದೆ. ಹೇಗಾದರೂ ಸರಿ ಸಿದ್ದರಾಮಯ್ಯಗೆ ಅಧಿಕಾರ ಬೇಕು. ಈ ಭೇಟಿ ಬಗ್ಗೆ ಕೇಂದ್ರಕ್ಕೂ ಮಾಹಿತಿ ಸಿಕ್ಕಿದೆ. ಅದಕ್ಕಾಗಿ ಯಡಿಯೂರಪ್ಪ ಅವರನ್ನು ಕಪಿಮುಷ್ಠಿಯಲ್ಲಿಟ್ಟುಕೊಳ್ಳಲು ಐಟಿ ದಾಳಿ ನಡೆಸಿದ್ದಾರೆ. ಐಟಿ ದಾಳಿ ಹಿಂದೆ  ಸ್ಪಷ್ಟವಾಗಿ ರಾಜಕೀಯ ಉದ್ದೇಶ ಇದೆ. ಇದರ ಬಗ್ಗೆ ಯಾವುದೇ ಅನುಮಾನ ಇಲ್ಲ ಎಂದು ಗಂಭೀರ ಆರೋಪ ಮಾಡಿದರು.

ಸಿಂಧಗಿ ಉಪಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ಅಲ್ಲಿ ಕಾಂಗ್ರೆಸ್ ಪಕ್ಷ ಲೆಕ್ಕಕ್ಕೆ ಇಲ್ಲ. ಅಲ್ಲಿ ಕಾಂಗ್ರೆಸ್ ಯಾವಾಗಲೂ ಮೂರನೇ ಸ್ಥಾನದಲ್ಲಿದೆ. ಅಲ್ಲೇನಿದ್ದರೂ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಪೈಪೋಟಿ. ನಾವು ಯೋಚನೆ ಮಾಡಿ ಅಭ್ಯರ್ಥಿ ಹಾಕಿದ್ದೇವೆ. ಸಿದ್ದರಾಮಯ್ಯಗೆ ಪಾಠ ಕಲಿಸಲು ಈ ಅಭ್ಯರ್ಥಿ ಹಾಕಿದ್ದೇವೆ. ಸಿದ್ದರಾಮಯ್ಯ ಯಾವ ದೊಣ್ಣೆನಾಯಕ ಅಂತಾ ಅವರು ಹೇಳಿದ ಅಭ್ಯರ್ಥಿ ಹಾಕಬೇಕು. ಎರಡು ಕ್ಷೇತ್ರದಲ್ಲಿ ಜೆಡಿಎಸ್ ಗಂಭೀರವಾಗಿ ಸ್ಪರ್ಧೆ ಮಾಡಲಿದೆ ಎಂದು ಹೆಚ್,ಡಿ ಕುಮಾರಸ್ವಾಮಿ ತಿಳಿಸಿದರು.

Key words: Siddaramaiah –IT – attack –BS yeddyurappa-PA-Former CM -HD Kumaraswamy-mysore

ENGLISH SUMMARY…

Siddaramaiah is the reason for IT raid on BSY’s aide: Former CM HDK explodes new bomb
Bengaluru, October 12, 2021 (www.justkannada.in): Former Chief Minister H.D. Kumaraswamy has alleged that the former Chief Minister Siddaramaiah is the reason for the recent Income Tax Department raid on the house of one of the former Chief Minister B.S. Yeddyurappa’s close aide.
Speaking in Mysuru today he said that the reason behind the raid is because Siddaramaiah visited Yedyurappa. “Siddaramaiah will do anything for power. His visiting Yedyurappa is also a part of this game. He is so hungry for power that he will do anything to get it. Even the center has collected information about this. Hence, they conducted the raid in order to control Yedyurappa. Political purpose is clearly visible behind this raid, there is no doubt in it,” he alleged.
In his response to the Sindhagi byelections, H.D.Kumaraswamy said the Congress party is not to be considered at all. “Congress is always in the third place in that constituency. It is a direct fight between JDS and BJP. We have fielded the candidate after thinking a lot. Yes, we have fielded this candidate in order to teach Siddaramaiah a lesson. Why should we field a candidate from our party as per his wish? who is he? JDS is going to give a tough fight in both the constituencies,” he added.
Keywords: Former Chief Minister H.D. Kumaraswamy/ IT raid/ BSY’s aide/ Siddaramaiah reason