ಮೈಸೂರಿನಲ್ಲಿ ಎರಡಂತಸ್ತಿನ ಮನೆ ಕುಸಿತ.

 

ಮೈಸೂರು, ಅ.12, 2021 : (www.justkannada.in news )ಕಳೆದ ವಾರ ಬೆಂಗಳೂರಿನಲ್ಲಿ ಸಂಭವಿಸಿದ್ದ ಮನೆ ಕುಸಿತದ ಸರಣಿ ಪ್ರಕರಣ ಮಾಸುವ ಮುನ್ನವೇ ಇದೀಗ, ಮೈಸೂರು ನಗರದಲ್ಲೂ ಅಂಥದ್ದೆ ಒಂದು ಘಟನೆ ನಡೆದಿದೆ.

ಮೈಸೂರಿನಲ್ಲಿ ಎರಡಂತಸ್ತಿನ ಮನೆ ಕುಸಿತಗೊಂಡಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರೆಲ್ಲ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದು ಮೈಸೂರಿನ ಇಟ್ಟಿಗೆಗೂಡಿನಲ್ಲಿ ನಡೆದ ಘಟನೆ.

ಶಿಥಿಲಗೊಂಡಿದ್ದ ಹಳೆ ಕಾಲದ ಮನೆ. ಕಳೆದ ಹಲವು ದಿನಗಳಿಂದ ಜಿಟಿ ಜಿಟಿ ಮಳೆ. ಈ ಹಿನ್ನೆಲೆಯಲ್ಲಿ ಮತ್ತಷ್ಟು ಶಿಥಿಲಗೊಡಿದ್ದ ಕಟ್ಟಡ.
ರಾಣಿಯಮ್ಮ (60) ಪೂಜಾಮಣಿ (60) ಸತೀಶ್ (30) ಈ ಮನೆಯಲ್ಲಿ ವಾಸವಾಗಿದ್ದರು. ಮನೆ ಕುಸಿಯುವ ಸುಳಿವು ಅರಿತು ಹೊರ ಬಂದ ಎಲ್ಲರೂ. ಇದರಿಂದಾಗಿ ಯಾವುದೇ ಅಪಾಯ ಸಂಭವಿಸಿಲ್ಲ.

ಸ್ಥಳಕ್ಕೆ ಪಾಲಿಕೆ ಅಧಿಕಾರಿಗಳು ಭೇಟಿ ಪರಿಶೀಲನೆ. ನಜರ್‌ಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.

key words : Mysore-building-collapsed-corporation-mcc-old-house