ಸಿದ್ಧರಾಮಯ್ಯ ಹೊಸಪೇಟೆಯಿಂದ ಸ್ಪರ್ಧಿಸಿದ್ರೆ ಹೊಲ ಮಾರಿ 1 ಕೋಟಿ ರೂ. ಕೊಡ್ತೇನೆ-ಅಭಿಮಾನಿಯಿಂದ ಆಹ್ವಾನ.

Promotion

ವಿಜಯನಗರ,ಫೆಬ್ರವರಿ,8,2023(www.justkannada.in): ಮಾಜಿ ಸಿಎಂ ಸಿ‍ದ್ಧರಾಮಯ್ಯಗೆ  ಇತ್ತೀಷೆಗಷ್ಟೆ ಯಾದಗಿರಿಯ ಬಿಜೆಪಿ ಮುಖಂಡರೊಬ್ಬರು ತಮ್ಮ ಕ್ಷೇತ್ರಕ್ಕೆ ಬಂದು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರೆ ತಮ್ಮ ವತಿಯಿಂದ ಒಂದು ಕೋಟಿ ರೂಪಾಯಿಗಳನ್ನು ನೀಡುವುದಾಗಿ ಆಫರ್ ನೀಡಿದ್ದರು.

ಇದೀಗ ವಿಜಯನಗರ ಜಿಲ್ಲೆ ಹೊಸಪೇಟೆಯ ಅಭಿಮಾನಿಯೊಬ್ಬರು ಸಹ ಇದೇ ರೀತಿ ಸಿದ‍್ಧರಾಮಯ್ಯಗೆ ಆಹ್ವಾನ ನೀಡಿದ್ದಾರೆ. ಗಾದಿಗನೂರು ಗ್ರಾಮದ ಮಲಿಯಪ್ಪ ಎಂಬುವವರು ಹೊಸಪೇಟೆಯಿಂದ ಸಿದ‍್ಧರಾಮಯ್ಯ ಸ್ಪರ್ಧಿಸಿದರೇ 2ಎಕರೆ ಜಮೀನು ಮಾರಿ 1 ಕೋಟಿ ರೂ ಹಣ ನೀಡುತ್ತೇನೆ ಎಂದು ಹೇಳಿದ್ದಾರೆ.  ಮಲಿಯಪ್ಪ ಅವರ ಬಳಿ 6 ಎಕರೆ ಹೊಲ ಇದ್ದು 2 ಎಕರೆ ಮಾರಿ ಹಣ ನೀಡುವುದಾಗಿ ತಿಳಿಸಿದ್ದಾರೆ.

ಹೊಸಪೇಟೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಸಿದ್ದರಾಮಯ್ಯನವರು ಇಲ್ಲಿಂದ ಸ್ಪರ್ಧಿಸಿ ಗೆದ್ದರೆ ಮಾತ್ರ ಕ್ಷೇತ್ರದ ಅಭಿವೃದ್ಧಿಯಾಗುತ್ತದೆ. ಅವರು ಸ್ಪರ್ಧಿಸುವುದಾದರೆ ತನಗಿರುವ 6 ಎಕರೆ ಜಮೀನನಲ್ಲಿ ಎರಡು ಎಕರೆ ಮಾರಿ ರೂ. 1 ಕೋಟಿಯನ್ನು ನೀಡುವುದಾಗಿ ಅವರು ತಿಳಿಸಿದ್ದಾರೆ.

Key words:  Siddaramaiah –contests- Hospet, – Rs 1 crore– invitation – fan.