ಸಿದ್ಧರಾಮಯ್ಯ ಎಲ್ಲೇ ಸ್ಪರ್ಧಿಸಿದ್ರೂ ಅವರ ಪಕ್ಷದವರೇ ಸೋಲಿಸುತ್ತಾರೆ-ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ.

Promotion

ಶಿವಮೊಗ್ಗ,ಮಾರ್ಚ್,23,2023(www.justkannada.in): ಸಿದ‍್ಧರಾಮಯ್ಯ ಎಲ್ಲೇ ಸ್ಪರ್ಧಿಸಿದರೂ ಅವರ ಪಕ್ಷದವರೇ ಅವರನ್ನ ಸೋಲಿಸುತ್ತಾರೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಸಿದ್ಧರಾಮಯ್ಯ ತಳ ಬುಡ ಇಲ್ಲದ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ವರುಣಾ ಕ್ಷೇತ್ರದಿಂದ ಬಾದಾಮಿ, ಬಾದಾಮಿಯಿಂದ ಕೋಲಾರ, ಕೋಲಾರದಿಂದ ಕುಷ್ಟಗಿ, ಕುಷ್ಟಿಗಿಯಿಂದ ಮತ್ತೆ ವರುಣಾಗೆ ಓಡಾಡುತ್ತಿದ್ದಾರೆ. ಈ ಮೊದಲು ಹೈಕಮಾಂಡ್ ಹೇಳಿದ ಕಡೆ ಸ್ಪರ್ಧೆ ಮಾಡುತ್ತೇನೆ ಎಂದಿದ್ದರು. ಈಗ ಪತ್ನಿ ಮಗ ಹೇಳಿದ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಅಂತಿದ್ದಾರೆ. ಇವರಿಗೆ ಕ್ಷೇತ್ರ ಇಲ್ಲ ಬೇರೆಯವರಿಗೆ ಹೇಗೆ ಟಿಕೆಟ್ ಕೊಡ್ತಾರೆ ಎಂದು ಟೀಕಿಸಿದರು.

ನಿಮ್ಮ ಬಸ್ ಯಾತ್ರೆ ಯಾವಾಗ ನಿಲ್ಲಿಸುತ್ತೀರಿ ಎಂದು ಕುಟುಕಿದ ಕೆ.ಎಸ್ ಈಶ್ವರಪ್ಪ, ಸಿದ್ಧರಾಮಯ್ಯ ಎಲ್ಲೇ ಸ್ಪರ್ಧಿಸಿದ್ರೂ ಅವರ ಪಕ್ಷದವರೇ ಸೋಲಿಸುತ್ತಾರೆ. ಚುನಾವಣೆಯಲ್ಲಿ ಸಿದ್ಧರಾಮಯ್ಯ ಸೋಲಬೇಕೆಂಬುದು ನನ್ನ ಆಸೆ. ಸಿದ್ಧರಾಮಯ್ಯ  ಶಿವಮೊಗ್ಗದಲ್ಲಿ ಸ್ಪರ್ಧೆ ಮಾಡುವ ಮನಸು ಮಾಡಲ್ಲ ಎಂದು ಲೇವಡಿ ಮಾಡಿದರು.

Key words: Siddaramaiah- contests-defeats – Former minister -KS Eshwarappa.