ಎಲ್ಲಡೆ ಸ್ಪರ್ಧಿಸಲು ಸಿದ್ಧರಾಮಯ್ಯ ಸ್ವತಂತ್ರರು: ಕೋಲಾರದ ಜನರು ತೀರ್ಮಾನ ಮಾಡ್ತಾರೆ- ಸಿಎಂ ಬೊಮ್ಮಾಯಿ.

Promotion

ಹುಬ್ಬಳ್ಳಿ,ಜನವರಿ, 10,2023(www.justkannada.in): ಕೋಲಾರದಿಂದ ಮಾಜಿ ಸಿಎಂ ಸಿದ್ಧರಾಮಯ್ಯ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ಎಲ್ಲಡೆ ಸ್ಪರ್ಧಿಸಲು ಸಿದ್ಧರಾಮಯ್ಯ ಸ್ವತಂತ್ರರು. ಆದರೆ ಸೋಲು ಗೆಲುವಿನ ಬಗ್ಗೆ ಕೋಲಾರದ ಜನರು ತೀರ್ಮಾನ ಮಾಡ್ತಾರೆ ಎಂದು ನುಡಿದರು.

ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕೋಲಾರ ಕ್ಷೇತ್ರದ  ಬಗ್ಗೆ ನಾನು ಯಾವುದೇ ವ್ಯಾಖ್ಯಾನ ಮಾಡಲ್ಲ. ಯಾರು ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು. ಆದರೆ ಅಲ್ಲಿನ ಜನ ಸೋಲು ಗೆಲುವಿನ ಬಗ್ಗೆ ನಿರ್ಧರಿಸುತ್ತಾರೆ ಎಂದರು.

2ಎ ಮೀಸಲಾತಿಗಾಗಿ ಪಂಚಮಸಾಲಿ ಹಠಹಿಡಿದಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ,  ಈಗಾಗಲೇ ಪ್ರವರ್ಗ 2ರಲ್ಲಿ ಸೇರ್ಪಡೆಗೆ ನಿರ್ಣಯ ಮಾಡಿದ್ದೇವೆ. ವರದಿಯನ್ನು ಬೇಗ ನೀಡುವಂತೆ ಸೂಚಿಸಿದ್ದೇನೆ. ಶಾಶ್ವತ ಆಯೋಗದಿಂದ ಬರುವ ವರದಿ ಮೇಲೆ ಎಲ್ಲಾ ಅಂತಿಮವಾಗಲಿದೆ ಎಂದರು. ಒಂದು ವೇಳೆ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಿದರೇ ಇತ್ತ ಹಿಂದುಳಿದ ವರ್ಗಗಳ ವಿರೋಧಕ್ಕೆ ಸರ್ಕಾರ ತುತ್ತಾಗಿ ಪರಿಣಾಮ ಎದುರಿಸಬಹುದು.

Key words: Siddaramaiah – contest -kolar -CM Bommai.