Wednesday, August 12, 2026

BDA Apartments

Home Front Page ಶೀಘ್ರದಲ್ಲೇ ಸ್ಯಾಂಟ್ರೋ ರವಿ ಬಂಧಿಸಿ ವಿಚಾರಣೆ- ಗೃಹ ಸಚಿವ ಅರಗ ಜ್ಞಾನೇಂದ್ರ ವಿಶ್ವಾಸ.

ಶೀಘ್ರದಲ್ಲೇ ಸ್ಯಾಂಟ್ರೋ ರವಿ ಬಂಧಿಸಿ ವಿಚಾರಣೆ- ಗೃಹ ಸಚಿವ ಅರಗ ಜ್ಞಾನೇಂದ್ರ ವಿಶ್ವಾಸ.

ಬೆಂಗಳೂರು,ಜನವರಿ,10,2023(www.justkannada.in): ಶೀಘ್ರದಲ್ಲೇ ಸ್ಯಾಂಟ್ರೋ ರವಿ ಬಂಧಿಸಿ ವಿಚಾರಣೆ ನಡೆಸಲಾಗುತ್ತದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಈ ಕುರಿತು ಇಂದು ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಸ್ಯಾಂಟ್ರೋ ರವಿ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದೆ.  ಶೀಘ್ರದಲ್ಲೇ ಆರೋಪಿ ಬಂಧಿಸಲಾಗುತ್ತದೆ.  ರವಿ ಹಿಂಬಾಲಕರನ್ನ ವಶಕ್ಕೆ ಪಡೆಯಲಾಗಿದೆ.ಸುಳ್ಳುಕೇಸ್ ದಾಖಲಿಸಿದ ಎಸ್ ಐ ವಿರುದ್ದ ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದರು.

ಗೃಹ ಸಚಿವರ ಮನೆಯಲ್ಲಿ ರವಿ ಸಿಗಬಹುದು ಎಂಬ ಹೆಚ್.ಡಿಕೆ ಹೇಳಿಕೆಗೆ ತಿರುಗೇಟು ನೀಡಿದ ಅರಗ ಜ್ಞಾನೇಂದ್ರ,  ಡಿಕೆ ಶಿವಕುಮಾರ್, ಸಿದ್ಧರಾಮಯ್ಯ, ಹೆಚ್.ಡಿಕೆ ಮನೆಯಲ್ಲಿ ಸಿಗಬಹುದು.  ಚುನಾವಣೆ ವೇಳೆ ಹೆಚ್.ಡಿ ಕುಮಾರಸ್ವಾಮಿ ಆರೋಪ ಮಾಡುತ್ತಾರೆ ಇಂತಹ ಹೇಳಿಕೆಯಿಂದ ಪ್ರಯೋಜನವಿಲ್ಲ ಎಂದು ಟಾಂಗ್ ನೀಡಿದರು.

Key words: Soon -Santro Ravi- arrest- Home Minister -Araga jnanendra