ಹಿಂದುಳಿದ ವರ್ಗದವರ ಭಿಕ್ಷೆಯಲ್ಲಿ ಸಿಎಂ ಆದವರು ಸಿದ್ಧರಾಮಯ್ಯ: ಆದ್ರೆ ನ್ಯಾಯ ಕೊಡಿಸಲಿಲ್ಲ- ನಳೀನ್ ಕುಮಾರ್ ಕಟೀಲ್ ಟೀಕೆ.

Promotion

ಬೆಂಗಳೂರು,ಅಕ್ಟೋಬರ್,11,2022(www.justkannada.in): ಸಿದ್ಧರಾಮಯ್ಯ ಹಿಂದುಳಿದ ವರ್ಗದವರ ಭಿಕ್ಷೆಯಲ್ಲಿ ಸಿಎಂ ಆದವರು. ಆದರೆ ಹಿಂದುಳಿದ ವರ್ಗಕ್ಕೆ ನ್ಯಾಯ ಕೊಡಿಸಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಟೀಕಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ನಳೀನ್ ಕುಮಾರ್ ಕಟೀಲ್,  ಎರಡು ತಂಡವಾಗಿ ಜನ ಸಂಕಲ್ಪಯಾತ್ರೆ ಮಾಡುತ್ತೇವೆ.  ಸರ್ಕಾರ ಎರಡು ಸಮುದಾಯದ ಬೇಡಿಕೆ ಹೀಡೆರಿಸಿದೆ. ಸಿದ್ಧರಾಮಯ್ಯ   ಅಹಿಂದ ನಾಯಕ ಎನ್ನುತ್ತಾರೆ. ಆದರೆ  ಹಿಂದುವಳಿದ ವರ್ಗದವರ ನ್ಯಾಯ ಕೊಡಿಸಲಿಲ್ಲ. ಸಿದ್ಧರಾಮಯ್ಯ ಅವಧೀಯಲ್ಲಿ ಮೀಸಲಾತಿ ಕೊಡಲಿಸಲಿಲ್ಲ. ಈಗ ಮೀಸಲಾತಿ ವಿರೋಧಿಸುವ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಗೆ ಯಾವ ನೈತಿಕತೆ ಇದೆ ಎಂದು ಕುಟುಕಿದರು.

ನಾವು  ಕೆಲಸ ಮಾಡಿದ್ದೇವೆ ಕ್ರೆಡಿಟ್ ತೆಗೆದುಕೊಳ್ಳುತ್ತೇವೆ. ಭ್ರಷ್ಟಾಚಾರ ಶುರು ಮಾಡಿದ್ದೇ.  ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರೇ ಕಾಂಗ್ರೆಸ್ ಎಂದು ಕಿಡಿಕಾರಿದರು.

Key words: Siddaramaiah – backward –classes-justice -Naleen Kumar Kateel.