ಟೋಕಿಯೊ ಪ್ಯಾರಾಲಿಂಪಿಕ್ಸ್’ನಲ್ಲಿ ಚಿನ್ನಕ್ಕೆ ಕೊರಳೊಡ್ಡಿದ ಷಟ್ಲರ್ ಕೃಷ್ಣ ನಗರ್

Promotion

ಬೆಂಗಳೂರು, ಸೆಪ್ಟೆಂಬರ್ 05, 2021 (www.justkannada.in): ಟೋಕಿಯೊ ಪ್ಯಾರಾಲಿಂಪಿಕ್ಸ್ ನ ಪುರುಷರ ಸಿಂಗಲ್ಸ್ ಎಸ್‌ಹೆಚ್ 6 ವಿಭಾಗದಲ್ಲಿ ಷಟ್ಲರ್ ಕೃಷ್ಣ ನಗರ್ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

ಇನ್ನು ಭಾರತದ ಸುಹಾಸ್ ಎಲ್. ಯತಿರಾಜ್ ಪುರುಷರ ಸಿಂಗಲ್ಸ್ ಎಸ್‌ಎಲ್ 4 ಕ್ಲಾಸ್‌ನ ಫೈನಲ್‌ನಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ.

ಈ ಮೂಲಕ ಕೃಷ್ಣ ನಗರ್ ಬ್ಯಾಡ್ಮಿಂಟನ್ ನಲ್ಲಿ ಚಿನ್ನದ ಪದಕ ಗೆದ್ದ ಎರಡನೇ ಭಾರತೀಯರಾಗಿದ್ದಾರೆ.
22 ವರ್ಷದ ಕೃಷ್ಣ, ರಾಜಸ್ಥಾನ ಮೂಲದವನಾಗಿದ್ದು, ಟೋಕಿಯೊದಲ್ಲಿ ನಡೆದ ಪ್ಯಾರಾಲಿಂಪಿಕ್ಸ್‌ಗೆ ತನ್ನ BWF ವಿಶ್ವ ಶ್ರೇಯಾಂಕಿತರಾಗಿದ್ದಾರೆ.