ಮೈಸೂರಲ್ಲಿ ಸರಕಾರಿ ಭೂಮಿ ಸರ್ವೇಗೆ ಆದೇಶಿಸಲು ಮನೀಶ್ ಮೌದ್ಗಿಲ್’ಗೆ ಅಧಿಕಾರ ಕೊಟ್ಟವರಾರು?

ಮೈಸೂರು, ಸೆಪ್ಟೆಂಬರ್ 05, 2021 (www.justkannada.in): ಸಾರಾ ಚೌಟ್ರ್ರೀ ಅಕ್ಕ. ಪಕ್ಕ ಭೂ ಒತ್ತುವರಿ ಬಗ್ಗೆ ಮರು ಸರ್ವೆ ಆದೇಶಿಸಿರುವ ಕಂದಾಯ ಇಲಾಖೆ ಅದೇಶ ಸಂಬಂಧ ಮಾಜಿ ಸಚಿವ ಸಾ ರಾ ಮಹೇಶ್ ಪರ‌ ಉಸ್ತುವಾರಿ ಸಚಿವ ಸೋಮಶೇಖರ್ ನಿಂತಿದ್ದಾರೆ.

ಭೂ ಒತ್ತುವರಿ ಬಗ್ಗೆ ಮರು ಸರ್ವೆ ಆದೇಶಿಸಿರುವ ಮನೀಶ್ ಮೌದ್ಗಿಲ್ ಅವರಿಗೆ ಅಧಿಕಾರ ಕೊಟ್ಟವರು ಯಾರು?ಈಗಾಗಲೇ ಪ್ರಾದೇಶಿಕ ಅಯುಕ್ತರು ವರದಿ ಕೊಟ್ಟಿದ್ದಾರೆ. ಇವರು ಪುನರ್ ಸರ್ವೆ ಮಾಡಲು ಕಾರಣ ಏನು? ಇದು ಐ ಎ ಎಸ್ ಅಧಿಕಾರಿಗಳ ದ್ವೇಷದ ರಾಜಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಐಎಎಸ್ ಅಧಿಕಾರಿಗಳ ಅಪ್ರಮಾಣಿಕತೆಯನ್ನು ಪ್ರಶ್ನೆ ಮಾಡಬಾರದೇ? ಐಎಎಸ್ ಅಧಿಕಾರಿಗಳ ಮೇಲೆ ಅಲಿಗೇಷನ್ ಮಾಡಿದ್ರೆ ಇಂತಹ ಆದೇಶಗಳನ್ನು ಹೊರಡಿಸುತ್ತಾರೆಯೇ? ಐಎಎಸ್ ಅಧಿಕಾರಿಗಳು ದ್ವೇಷದ ರಾಜಕಾರಣ ಮಾಡುವುದು ಸರಿ ಅಲ್ಲ‌ ಎಂದು ಉಸ್ತುವಾರಿ ಸಚಿವ ಸೋಮಶೇಖರ್ ಹೇಳಿದ್ದಾರೆ.

Don’t question the dishonesty of IAS officer? says minister somashekar