ಇತ್ತೀಚೆಗೆ ಅಗಲಿದ ಪತ್ರಕರ್ತರಿಗೆ ಕೆಯುಡಬ್ಲ್ಯೂಜೆ ವತಿಯಿಂದ ಶ್ರದ್ಧಾಂಜಲಿ ಸಲ್ಲಿಕೆ.

Promotion

ಬೆಂಗಳೂರು,ಜುಲೈ,13,2021(www.justkannada.in):  ಮಾಜಿ ಸಿಎಂ ಕುಮಾರಸ್ವಾಮಿ ಅವರ ಮಾಧ್ಯಮ ಕಾರ್ಯದರ್ಶಿ ಕೆ.ಸಿ.ಸದಾನಂದ, ಪಾಂಡವಪುರ ತಾಲ್ಲೂಕಿನ ಸಂಘದ ಖಜಾಂಚಿ ರಾಬರ್ಟ್ ರಾಜ್, ಕ್ರೈಂ ರಿಪೋರ್ಟರ್ ಸುನಿಲ್ ಹೆಗ್ಗರವಳ್ಳಿ, ದಾವಣಗೆರೆಯ ಎಚ್.ಕೆ.ಬಸವರಾಜ ಸೇರಿದಂತೆ ಅಗಲಿದ ಪತ್ರಕರ್ತರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.jk

ಅಗಲಿದವರ ಭಾವಚಿತ್ರಕ್ಕೆ ಗೌರವಪೂರ್ವಕವಾಗಿ ಪುಷ್ಪ ಸಮರ್ಪಣೆ ಮಾಡಿ ಮಾತನಾಡಿದ, ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮೊದಲು ಒಬ್ಬೊಬ್ಬ ಪತ್ರಕರ್ತರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದೆವು. ಕೋವಿಡ್ ಬಳಿಕ ಹೆಚ್ಚು ಪತ್ರಕರ್ತರು ನಿಧನರಾಗುತ್ತಿದ್ದು ಒಟ್ಟೊಟ್ಟಿಗೆ ಶ್ರದ್ಧಾಂಜಲಿ ಸಲ್ಲಿಸುವಂತ ಪರಿಸ್ಥಿತಿ ಬಂದಿರುವುದು ನೋವಿನ ಸಂಗತಿ ಎಂದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಾಧ್ಯಮ ಕಾರ್ಯದರ್ಶಿ ಕೆ‌.ಸಿ.ಸದಾನಂದ ಮತ್ತು ಸುನಿಲ್ ಹೆಗ್ಗರವಳ್ಳಿ ಅವರ ಸಾವು ಯಾರೂ ನಿರೀಕ್ಷಿಸಿರಲಿಲ್ಲ. ಸಾವು ನಿಶ್ಚಿತ. ಬದುಕಿನ ಕಾಲಘಟ್ಟದಲ್ಲಿ ನಮ್ಮ ಶಕ್ತಿ ಮೀರಿ ಒಳಿತು ಮಾಡುವ ಮತ್ತು ಸಮಾಜಮುಖಿಯಾಗಿ ಸ್ಪಂದಿಸುವ ಕೆಲಸ ಮಾಡಬೇಕು ಎಂದರು.

ಅಗಲಿದ ಪತ್ರಕರ್ತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಶಿವಾನಂದ ತಗಡೂರು ತಿಳಿಸಿದರು.

ಕೆಯುಡಬ್ಲ್ಯೂಜೆ ಮಾಜಿ ಕಾರ್ಯದರ್ಶಿ ಯೂಸುಫ್ ಪಟೇಲ್ ಮಾತನಾಡಿ, ಸಂಘ ಸಾಕಷ್ಟು ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಇನ್ನು ಪತ್ರಕರ್ತರ ಆರೋಗ್ಯ ಯೋಜನೆಗಳ ಬಗ್ಗೆ ಸಂಘ ಹೆಚ್ಚು ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಕೆಯುಡಬ್ಲ್ಯೂಜೆ ಪ್ರಧಾನ ಕಾರ್ಯದರ್ಶಿ ಜೆ.ಸಿ.ಲೋಕೇಶ್, ಗ್ರಾಮೀಣ ಕಾರ್ಯದರ್ಶಿ ಬಂಗ್ಲೆ ಮಲ್ಲಿಕಾರ್ಜುನ, ಬೆಂಗಳೂರು ನಗರ ಘಟಕ ಪ್ರಧಾನ ಕಾರ್ಯದರ್ಶಿ ದೇವರಾಜ್ ಹಾಜರಿದ್ದರು.

Key words: Shraddhanjali- submits – death-journalists – KUWJ