ಕಿಚ್ಚ ಸುದೀಪ್ ‘ಫ್ಯಾಂಟಮ್​’ ಚಿತ್ರಕ್ಕೆ ಶ್ರದ್ಧಾ ಶ್ರೀನಾಥ್​ ನಾಯಕಿ

Promotion

ಬೆಂಗಳೂರು, ಮಾರ್ಚ್ 05, 2020 (www.justkannada.in): ಅನೂಪ್​ ಭಂಡಾರಿ ನಿರ್ದೇಶನಕ ‘ಫ್ಯಾಂಟಮ್​’ ಚಿತ್ರದಲ್ಲಿ ಕಿಚ್ಚ ಸುದೀಪ್​ ನಾಯಕಿಯಾಗಿ ಶ್ರದ್ಧಾ ಶ್ರೀನಾಥ್​ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಈ ಚಿತ್ರದಲ್ಲಿ ತೆಲುಗು ಬೆಡಗಿ ಸಮಂತಾ ನಟಿಸುತ್ತಿದ್ದಾರೆ ಎನ್ನಲಾಗಿತ್ತು. ಆದರೀಗ ‘ಈಗ’ ಚಿತ್ರದ ನಂತರ ಈ ಜೋಡಿ ಮತ್ತೆ ಒಂದಾಗುತ್ತಿದ್ದಾರೆ ಎಂಬ ವಿಷಯ ಸುಳ್ಳು ಎನ್ನಲಾಗಿದೆ.

ಇನ್ನು ‘ಫ್ಯಾಂಟಮ್’​ ಚಿತ್ರದ ಚಿತ್ರೀಕರಣಕ್ಕೆ ಸೋಮವಾರ ಚಾಲನೆ ಸಿಕ್ಕಿದೆ. ಹಾಗಾಗಿ ಈ ಖುಷಿಯ ಸಂದರ್ಭವನ್ನು ಕಿಚ್ಚ ಸುದೀಪ್​ ಟ್ವೀಟ್​ ಮಾಡುವ ಮೂಲಕ ಹಂಚಿಕೊಂಡಿದ್ದರು. ‘ಫ್ಯಾಂಟಮ್ ಸಿನಿಮಾದ ಫೋಟೊಶೂಟ್ ಮತ್ತು ಪ್ರೋಮೋ ಶೂಟಿಂಗ್ ಕಂಠೀರವ ಸ್ಟುಡಿಯೋದಲ್ಲಿ ನಡೆದಿದೆ.