ಮಹಿಳೆಯರ ಟಿ-20 ವಿಶ್ವಕಪ್ ಕ್ರಿಕೆಟ್: ಫೈನಲ್ ಪ್ರವೇಶಿಸಿದ ಟೀಂ ಇಂಡಿಯಾ

ಸಿಡ್ನಿ, ಮಾರ್ಚ್ 05, 2020 (www.justkannada.in): ಮಹಿಳೆಯರ ಟಿ-20 ವಿಶ್ವಕಪ್ ಇತಿಹಾಸದಲ್ಲಿ ಭಾರತ ಮೊದಲ ಬಾರಿಗೆ ಸೆಮಿಫೈನಲ್ ತಲುಪಿದೆ.

ಹೌದು. ಭಾರತ-ಇಂಗ್ಲೆಂಡ್ ಸೆಮೀಸ್ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಪಂದ್ಯ ರದ್ದಾಗಿದ್ದ, ಭಾರತ ಫೈನಲ್​​ಗೆ ಪ್ರವೇಶ ಮಾಡಿದೆ.

ಗ್ರೂಪ್ ಎ ನಲ್ಲಿ ಭಾರತ ಆಡಿರುವ ನಾಲ್ಕು ಪಂದ್ಯಗಳ ಪೈಕಿ 4 ರಲ್ಲೂ ಗೆಲುವು ಸಾಧಿಸಿ 8 ಅಂಕದೊಂದಿಗೆ ಅಗ್ರಸ್ಥಾನದಲ್ಲಿದೆ. ಹೀಗಾಗಿ ಟೀಂ ಇಂಡಿಯಾ ಮಹಿಳೆಯರು ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದಾರೆ.

ಇನ್ನೊಂದು ಸೆಮಿ ಫೈನಲ್ ಫೈನಲ್ ಕಾದಾಟದಲ್ಲಿ ದಕ್ಷಿಣ ಆಫ್ರಿಕಾ ಮಹಿಳೆಯರು ಹಾಗೂ ಆಸ್ಟ್ರೇಲಿಯಾ ವನಿತೆಯರು ಮುಖಾಮುಖಿ ಆಗಲಿದ್ದಾರೆ. ಹೀಗಾಗಿ ಪಂದ್ಯ ರದ್ದಾದರೆ ಲೀಗ್​ ಹಂತದಲ್ಲಿ ಸೋಲಿಲ್ಲದ ಸರದಾರರಾಗಿ ಮೆರೆದಿರುವ ಟೀಂ ಇಂಡಿಯಾ ವುಮೆನ್ಸ್​ಗೆ ಫೈನಲ್ ಆಡುವ ಅವಕಾಶ ದೊರೆತಿದೆ.