ಮೈಸೂರಿನ ಚಿನ್ನದ ಅಂಗಡಿಯಲ್ಲಿ ಲಾಂಗ್ ತೋರಿಸಿ ದರೋಡೆಗೆ ಯತ್ನ

Promotion

ಮೈಸೂರು, ಜನವರಿ 04, 2019 (www.justkannada.in): ಲಾಂಗ್ ತೋರಿಸಿ ದರೋಡೆಗೆ ಯತ್ನ ನಡೆಸಲಾಗಿದೆ.

ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯ ಚಿನ್ನದ ಅಂಗಡಿಯಲ್ಲಿ ಘಟನೆ ನಡೆದಿದೆ. ಹೆಲ್ಮೆಟ್ ಧರಿಸಿ ಚಿನ್ನದ ಅಂಗಡಿಗೆ ನುಗ್ಗಿದ್ದ ಕಿಡಿಗೇಡಿಗಳು ಈ ಕೆಲಸ ಮಾಡಿದ್ದಾರೆ.

ರಾಜೇಶ್ ಎಂಬುವವರಿಗೆ ಸೇರಿದ ಮೇಘ ಜ್ಯುವೆಲ್ಸ್ ಅಂಗಡಿಯಲ್ಲಿ ಘಟನೆ ನಡೆದಿದೆ. ಅಂಗಡಿಯಲ್ಲಿದ್ದವರನ್ನು ಹೆದರಿಸಿದ ಆರೋಪಿ,  ಅಂಗಡಿ ಮಾಲೀಕ ರಾಜೇಶ್, ಕಾರ್ಮಿಕ ಮಹೇಶ್ ಕಿರುಚಾಡಿದ ತಕ್ಷಣ ಸಾರ್ವಜನಿಕರು ಜಮಾಯಿಸುತ್ತಿದ್ದಂತೆ ಜರ್ಕಿನ್ ನಿಂದ ಲಾಂಗ್ ತೆಗೆದು ಬೆದರಿಕೆ ಹಾಕಿದ್ದಾನೆ.

ಇದಾದ ಬಳಿಕ ಕೆಲವೇ ಕ್ಷಣದಲ್ಲಿ ಸ್ಕೂಟರ್ ಏರಿ ಪರಾರಿಯಾದ ದುಷ್ಕರ್ಮಿ. ವಿಷಯ ತಿಳಿದ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸಿಸಿ ಕ್ಯಾಮರಾ ಫುಟೇಜ್ ವಶಪಡಿಸಿಕೊಂಡ ಪೊಲೀಸರು. ತನಿಖೆ ಮುಂದುವರಿಸಿದ್ದಾರೆ. ಕೆ.ಆರ್.ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.