ಶೂಟೌಟ್ ಪ್ರಕರಣ: ಯುವಕನ ಕುಟುಂಬಕ್ಕೆ ನೆರವು ನೀಡಿ ಮಾನವೀಯತೆ ಮೆರೆದ ಮೈಸೂರು ಪೊಲೀಸರು.

Promotion

ಮೈಸೂರು,ಸೆಪ್ಟಂಬರ್,23,2021(www.justkannada.in):  ಮೈಸೂರಿನಲ್ಲಿ ನಡೆದಿದ್ಧ ಶೂಟೌಟ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಂಡಿನ ದಾಳಿಗೆ ತುತ್ತಾಗಿದ್ದ ದಡದಹಳ್ಳಿ ಯುವಕನ ಕುಟುಂಬಕ್ಕೆ ಬಹುಮಾನದ ಹಣದಲ್ಲಿ ಒಂದು ಲಕ್ಷ ರೂ. ನೆರವು ನೀಡಿ ಮೈಸೂರಿನ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.

ಮೈಸೂರಿನ ವಿದ್ಯಾರಣ್ಯಪುರಂ ಠಾಣಾ ವ್ಯಾಪ್ತಿಯಲ್ಲಿ ಶೂಟೌಟ್ ನೆಡೆದಿತ್ತು. ಈ ವೇಳೆ ದರೋಡೆಕೋರರ ಗುಂಡಿನ ದಾಳಿಗೆ ದಡದಹಳ್ಳಿ ಯುವಕ ಚಂದ್ರು ಬಲಿಯಾಗಿದ್ದ. ಪೊಲೀಸರು ಶೀಘ್ರವಾಗಿ ಈ ಪ್ರಕರಣವನ್ನ ಬೇಧಿಸುವಲ್ಲಿ ಯಶಸ್ವಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರು ಪೊಲೀಸರಿಗೆ ರಾಜ್ಯ ಸರ್ಕಾರ5 ಲಕ್ಷರೂ. ಬಹುಮಾನ ಘೋಷಿಸಿತ್ತು.

ಇದೀಗ ಬಹುಮಾನದ ಹಣದಲ್ಲಿ ಚಂದ್ರು ಕುಟುಂಬಕ್ಕೆ ಪೊಲೀಸರು ಒಂದು ಲಕ್ಷರೂ. ನೆರವು ನೀಡಿದ್ದಾರೆ. ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರು ನಗದು ಹಸ್ತಾಂತರ ಮಾಡಿದರು. ಡಿಸಿಪಿಗಳಾದ ಪ್ರದೀಪ್ ಗುಂಟಿ, ಗೀತಾಪ್ರಸನ್ನ ಉಪಸ್ಥಿತರಿದ್ದರು.

Key words: shootout case-Mysore police – help -humanity -young man