ಆರ್ ಸಿಬಿ ಅಭಿಮಾನಿಗಳಿಗೆ ಶಾಕ್: ಎಲ್ಲಾ ಮಾದರಿ ಕ್ರಿಕೆಟ್ ಗೆ ವಿದಾಯ ಹೇಳಿದ ಮಿ.360 ಡಿಗ್ರಿ ಖ್ಯಾತಿಯ ಎಬಿಡಿ ವಿಲಿಯರ್ಸ್.

ಬೆಂಗಳೂರು,ನವೆಂಬರ್,19,2021(www.justkannada.in):  2018ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ನಿವೃತ್ತಿ ಘೋಷಿಸಿದ್ದ ಮಿ.360 ಡಿಗ್ರಿ ಖ್ಯಾತಿಯ ಎಬಿಡಿ ವಿಲಿಯರ್ಸ್ ಇದೀಗ ಎಲ್ಲಾ ಮಾದರಿಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಮೊದಲು ಡೆಲ್ಲಿ ಪರ ಆಡಿದ್ದ ಎಬಿಡಿ ವಿಲಿಯರ್ಸ್ ನಂತರ 2011ರಿಂದ ಇಲ್ಲಿವರೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಪರವಾಗಿ ಆಡಿದ್ದಾರೆ. , ಸದ್ಯ ಇವರು ಇನ್ನುಮುಂದೆ ಯಾವುದೇ ಮಾದರಿಯ ಕ್ರಿಕೆಟ್​ನಲ್ಲಿ ಆಡುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಆರ್ ಸಿಬಿ ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿದ್ದಾರೆ.

ಎಬಿಡಿ ಈ ಹಿಂದೆಯೆ 2018ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್​ ಗೆ ಗುಡ್​ ಬೈ ಹೇಳಿದ್ದರು. ಆದರೆ, ಇತರೆ ದೇಶೀಯ ಟೂರ್ನಮೆಂಟ್ ​ಗಳಲ್ಲಿ ಕಣಕ್ಕಿಳಿಯುತ್ತಿದ್ದರು. ಇದೀಗ ವಿದಾಯ ಹೇಳಿರುವ ಎಬಿ ಡಿವಿಲಿಯರ್ಸ್ ಈ ಬಗ್ಗೆ ಅವರೇ ಸ್ವತಃ ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ.

“ಇದೊಂದು ಅದ್ಭುತ ಪ್ರಯಾಣವಾಗಿದೆ, ಆದರೆ ನಾನು ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ಈವರೆಗೆ ನಾನು ತುಂಬಾ ಖುಷಿಯಿಂದ, ಉತ್ಸಾಹದಿಂದ ಆಟವನ್ನು ಆಡಿದ್ದೇನೆ. ಈಗ ನನಗೆ 37 ವರ್ಷವಾಗಿದೆ. ಹಿಂದಿನ ರೀತಿ ಆಟವಾಡಲು ಸಾಧ್ಯವಾಗದು” ಎಂದು ಬರೆದುಕೊಂಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಈ ಬಗ್ಗೆ ಟ್ವೀಟ್ ಮಾಡಿದೆ.

Key words: Shock – RCB fans-ABD Villiers- goodbye – all – cricket.