‘ದ್ರೋಣ’ನಾದ ಶಿವಣ್ಣ: ಮೊದಲ ಸಾಂಗ್ ಕಂಡು ಖುಷ್ ಆದ ಅಭಿಮಾನಿಗಳು

Promotion

ಬೆಂಗಳೂರು, ಡಿಸೆಂಬರ್ 29, 2019 (www.justkannada.in): ‘ಶ್ರೀ ರಾಮನೆ’ ಹಾಡು ರಿಲೀಸ್ ಆಗುತ್ತಿದ್ದಂತೆ ಶಿವಣ್ಣ ನ ಮೇಲಿನ ಮುಂದಿನ ಸಿನಿಮಾದ ನಿರೀಕ್ಷೆ ದುಪ್ಟಟ್ಟಾಗಿದೆ.

ಹೌದು. ‘ದ್ರೋಣ’ ಫಸ್ಟ್ ಸಾಂಗ್ ನಲ್ಲೆ ಅಭಿಮಾನಿಗಳ ಮನಗೆದ್ದಿದೆ.. ಶಿವಣ್ಣ ಈ ಹಾಡಿನಲ್ಲಿ ರಘುಕುಲ ರಾಮನ ಆರಾಧನೆ ಮಾಡುವ ಚಿತ್ರಗಳು ಮತ್ತು ಹಾಡಿನ ಚಿತ್ರೀಕರಣದ ಒಂದು ಝಲಕ್ ನೀಡುತ್ತಿದ್ದಂತೆ ಸಿನಿಪ್ರಿಯರು ಮನಸೋತು ರಾಮನಾಮ ಜಪ ಮಾಡುತ್ತಿದ್ದಾರೆ.

ಜೈ ಶ್ರೀರಾಮ… ಜೈ ಶಿವಣ್ಣ… ಜೈ ಹನುಮಾ… ಎಂಬ ಹರ್ಷೋದ್ಘಾರ ಅಲ್ಲಲ್ಲಿ ಕೇಳಿಬರುತ್ತಿದೆ. ಆನಂದ್ ಆಡಿಯೋ ಯೂ ಟ್ಯೂಬ್ ಚಾನಲ್​ನಲ್ಲಿ 2:30ರ ವೇಳೆಗೆ ಸಾಂಗ್ ಹರಿಬಿಟ್ಟ ತಂಡಕ್ಕೆ ಇದು ಸಂತಸ ತಂದಿದೆ.

ಶ್ರೀ ರಾಮನೆ ಗೀತೆಗೆ ರಾಮ್​ಕ್ರಿಶ್ ಸಂಗೀತ ಸಂಯೋಜಿಸಿದ್ದಾರೆ. ಡಾ. ವಿ ನಾಗೇಂದ್ರ ಪ್ರಸಾದ್, ಪನೀಶ್ ರಾಜ್ ಮತ್ತು ಅರಸು ಅಂತಾರೆ ಬರೆದ ಸಾಲಿಗೆ ವಿಜಯ್ ಪ್ರಕಾಶ್ ಸ್ವರ ಮಾಧುರ್ಯದ ಸ್ಪರ್ಶವಿದೆ.

ನಿರ್ದೇಶಕ ಪ್ರಮೋದ್ ಚಕ್ರವರ್ತಿ ಮೊದಲ ಪ್ರಚಾರದಲ್ಲಿ ನೂರಕ್ಕೆ ನೂರರಷ್ಟು ಅಂಕ ಗಳಿಸಿದಷ್ಟು ಉತ್ಸಾಹ ದ್ರೋಣ ಹಾಡಿಗೆ ಸಿಕ್ಕಿದೆ. ದ್ರೋಣ ಚಿತ್ರದಲ್ಲಿ ಕರುನಾಡ ಚಕ್ರವರ್ತಿಗೆ ಇನಿಯಾ ಜೋಡಿಯಾಗಿದ್ದು ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಮಹಾದೇವಪ್ಪ ಹಲಗಟ್ಟಿ ನಿರ್ಮಾಣದ ಚಿತ್ರ ಡಾಲ್ಫಿನ್ ಮೀಡಿಯಾ ಹೌಸ್ ಬ್ಯಾನರ್ ಅಡಿಯಲ್ಲಿ ಶೀಘ್ರದಲ್ಲಿಯೇ ಕನ್ನಡಿಗರ ಮನಗೆಲ್ಲಲ್ಲು ತಯ್ಯಾರಿ ನಡೆಸಿದೆ.