ಜನವರಿಯಿಂದ ಮತ್ತೆ ‘ಭೈರತಿ ರಣಗಲ್ಲು’ ಆರ್ಭಟ ಶುರು !

Promotion

ಬೆಂಗಳೂರು, ಸೆಪ್ಟೆಂಬರ್ 26, 2019 (www.justkannada.in): ‘ಮಫ್ತಿ’ ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಪಾತ್ರದ ಹೆಸರು ‘ಭೈರತಿ ರಣಗಲ್ಲು’.

ಇದೀಗ ಅದೇ ಹೆಸರಿನ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಕಾಣಿಸಿಕೊಳ್ಳುತ್ತಿದ್ದಾರೆ. ‘ಬೈರತಿ ರಣಗಲ್ಲು’ ಸಿನಿಮಾ ಮುಂದಿನ ವರ್ಷದ ಜನವರಿಯಲ್ಲಿ ಸೆಟ್ಟೇರಲಿದೆ.

ಅಂದಹಾಗೆ ಇದು ‘ಮಫ್ತಿ’ ಚಿತ್ರದ ಮುಂದುವರಿದ ಭಾಗ. ಜತೆಗೆ ಶಿವರಾಜ್‌ಕುಮಾರ್‌ ಅವರ 125ನೇ ಚಿತ್ರ. ಹೀಗಾಗಿ ಸಾಕಷ್ಟು ಕುತೂಹಲ ಮೂಡಿಸಿದೆ.

ಶ್ರೀಮುರಳಿ ಕೂಡ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ನರ್ತನ್‌ ಅವರೇ ಈ ಚಿತ್ರ ನಿರ್ದೇಶಿಸಲಿದ್ದಾರೆ.