ಮೀ 2 ಫೈ 2 ಎನ್ನುತ್ತ ಕನ್ನಡಕ್ಕೆ ಬಂದ ನಟಿ ಶ್ರೀ ರೆಡ್ಡಿ

ಬೆಂಗಳೂರು, ಸೆಪ್ಟೆಂಬರ್ 26, 2019 (www.justkannada.in): ಕಾಸ್ಟಿಂಗ್ ಕೌಚ್ ವಿರುದ್ಧ ಸಂಚಲನ ಸೃಷ್ಟಿಸಿದ ನಟಿ ಶ್ರೀ ರೆಡ್ಡಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.

ಶ್ರೀರೆಡ್ಡಿಯ ಕನ್ನಡ ಚಿತ್ರದ ಪೋಸ್ಟರ್ ಒಂದು ಹರಿದಾಡುತ್ತಿದೆ. ಮೀಟೂ ಎಳೆಯನ್ನೆ ಇಟ್ಟುಕೊಂಡು ಚಿತ್ರಕ್ಕೂ ಸಹ ಮೀ 2 ಫೈ 2 ಎಂದು ಟೈಟಲ್ ಇಡಲಾಗಿದೆ.

ಶ್ರೀರೆಡ್ಡಿ ಜೊತೆ ಹಿಬಾ ಪಾಟಿಲ್, ಪೂನಂ ಪಾಂಡೆ, ರಿಚಾ ಪಣೈ ಮತ್ತು ಸುಪ್ರಿತಾ ಶೆಟ್ಟಿ ಕೂಡ ಪೋಸ್ಟರ್ ನಲ್ಲಿ ಇದ್ದಾರೆ. ಆದರೆ ಈ ಕುರಿತು ಅಧಿಕೃತ ಘೋಷಣೆ ಹೊರಬಂದಿಲ್ಲ.