ಶಾರುಖ್ ಖಾನ್ ʼಜವಾನ್ʼ ಓಟಿಟಿ ರಿಲೀಸ್ ಡೇಟ್ ಫಿಕ್ಸ್ !

Promotion

ಬೆಂಗಳೂರು, ಸೆಪ್ಟೆಂಬರ್ 20, 2023 (www.justkannada.in): ಶಾರುಖ್‌ ಖಾನ್‌ ಅವರ ʼಜವಾನ್‌ʼ ಸಿನಿಮಾ ನೆಟ್‌ಫ್ಲಿಕ್ಸ್‌ ನಲ್ಲಿ ರಿಲೀಸ್‌ ಗೆ ರೆಡಿಯಾಗಿದೆ.

ಶಾರುಖ್ ಜತೆ ನಯನತಾರಾ, ದೀಪಿಕಾ ಪಡುಕೋಣೆ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿರುವ ಜವಾನ್  ಡಿಸೆಂಬರ್‌ 22 ರಂದು ಒಟಿಟಿಯಲ್ಲಿ ರಿಲೀಸ್‌ ಆಗಲಿದೆ.

ಬಾಲಿವುಡ್‌ ಸೇರಿದಂತೆ ಟಾಲಿವುಡ್‌, ಕಾಲಿವುಡ್‌ ನಲ್ಲಿ ಸಿನಿಮಾ ಬ್ಲಾಕ್‌ ಬಸ್ಟರ್‌ ಹಿಟ್‌ ಆಗಿದೆ. ಶೀಘ್ರದಲ್ಲಿ ಸಿನಿಮಾ ಸಾವಿರ ಕೋಟಿ ಕ್ಲಬ್‌ ಸೇರುವ ಸಾಧ್ಯತೆಯಿದೆ.

ಸದ್ಯಕ್ಕೆ ಬಾಕ್ಸ್‌ ಆಫೀಸ್‌ ನಲ್ಲಿ 700 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿದೆ. ಸಿನಿಮಾ ಥಿಯೇಟರ್‌ ನಲ್ಲಿ ಇನ್ನು ಕೂಡ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.

ಥಿಯೇಟರ್ ಬಿಡುಗಡೆಯಲ್ಲಿ‌ ರಿಲೀಸ್‌ ಆಗುವ ವೇಳೆ ಕಟ್‌ ಮಾಡಿರುವ ದೃಶ್ಯಗಳನ್ನು ಓಟಿಟಿ ರಿಲೀಸ್‌ ನಲ್ಲಿ ಸೇರಿಸಿದಾಗ ಸಿನಿಮಾದ ಅವಧಿ 3:15 ಗಂಟೆಯಷ್ಟು ಆಗುತ್ತದೆ. ಚಿತ್ರದ ನಿರ್ದೇಶಕ ಅಟ್ಲಿ ಈ ಕೆಲಸ ಮಾಡುತ್ತಿದ್ದಾರೆ.