ಸ್ವಾಭಿಮಾನವಿದ್ದರೇ ರಾಜ್ಯ ಬಿಟ್ಟು ಯಾಕೆ ಹೋಗಬೇಕಿತ್ತು..? ಅತೃಪ್ತ ಶಾಸಕರ ವಿರುದ್ದ ಕಿಡಿ: ರಾಜ್ಯಾಪಾಲರ ನಡೆಯನ್ನೂ ಪ್ರಶ್ನಿಸಿದ ಶಾಸಕ ಎ. ಟಿ ರಾಮಸ್ವಾಮಿ…

ಬೆಂಗಳೂರು,ಜು,22,2019(www.justkannada.in): ರಾಜೀನಾಮೆ ನೀಡಿ ಮುಂಬೈಗೆ ತೆರಳಿರುವ 15 ಮಂದಿ ಅತೃಪ್ತ ಶಾಸಕರು ನಾವು ಯಾವುದೇ ಆಸೆ ಆಮಿಷಕ್ಕೆ ಒಳಗಾಗಿಲ್ಲ. ಸ್ವಾಭಿಮಾನದಿಂದ ರಾಜೀನಾಮೆ  ಕೊಟ್ಟಿದ್ದೇವೆ ಎಂದಿದ್ದಾರೆ. ಆಗಾದರೇ ಸ್ವಾಭಿಮಾನವಿದ್ದಿದ್ದರೇ ಅವರು ರಾಜ್ಯ ಬಿಟ್ಟು ಯಾಕೆ ಹೋಗಬೇಕಿತ್ತು ಎಂದು ಜೆಡಿಎಸ್ ಶಾಸಕ ಎಟಿ ರಾಮಸ್ವಾಮಿ ಪ್ರಶ್ನಿಸಿದರು.

ವಿಧಾನಸಭೆ ಕಲಾಪದಲ್ಲಿ ವಿಶ್ವಾಸಮತಯಾಚನೆ ಪ್ರಸ್ತಾಪದ ಮೇಲಿನ ಚರ್ಚೆ ವೇಳೆ ಮಾತನಾಡಿದ ಶಾಸಕ ಎಟಿ ರಾಮಸ್ವಾಮಿ,  ಈಗ ಎಲ್ಲಾ ಕಡೆ ಪ್ರಜಾಪ್ರಭುತ್ವ ಮೌಲ್ಯಗಳು ಇಲ್ಲ.  ವಿರೋಧ  ನೈತಿಕ ಮೌಲ್ಯ ಸಿದ್ದಾಂತದ ಮೇಲೆ ನಿರ್ಣಯ ಆಗಲ್ಲ.  ವಿಧಾನಸೌಧದ ನ್ಯಾಯ, ಧರ್ಮ,ಸಿದ್ಧಾಂತ ಕುಸಿಯುತ್ತಿವೆ. ಪ್ರಜಾಪ್ರಭುತ್ವದ ಮೌಲ್ಯಗಳು ಉಳಿದಿಲ್ಲ ಇಂದು ಮೂರು ಪಕ್ಷಗಳು ರೆಸಾರ್ಟ್ ಗೆ ನಿಂತು ಬಿಟ್ಟಿವೆ ಸರ್ಕಾರದ ಅಳಿವು, ಉಳಿವು ಸಂಖ್ಯಾಬಲದ ಮೇಲಿದೆ ಎಂದು ತಿಳಿಸಿದರು.

ಹಾಗೆಯೇ ರಾಜ್ಯದಲ್ಲಿ ಭೀಕರ ಬರಗಾಲವಿದೆ. 156 ತಾಲ್ಲೂಕುಗಳಲ್ಲಿ ಭೀಕರ ಬರವಿದೆ.  ಅಂತರ್ಜಲ ಕುಸಿದಿದೆ,ನೀರಿಗೆ ಹಾಹಾಕಾರವಿದೆ. ಇಂತ ವಿಚಾರಗಳ ಬಗ್ಗೆ ಸದನದಲ್ಲಿ ಚರ್ಚೆಯಾಗಬೇಕು. ಆದರೆ ನಮ್ಮ ಅಧಿಕಾರ ದಾಹಕ್ಕೆ ಪ್ರಯತ್ನ ನಡೆದಿದೆ. ಸರ್ಕಾರದ ಅಂಕುಡೊಂಕು ತಿದ್ದಬೇಕು. ಪ್ರತಿಪಕ್ಷ ಆ ಕೆಲಸ ಮಾಡುತ್ತಿಲ್ಲವೆಂಬ ನೋವಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ 15 ಮಂದಿ ಅತೃಪ್ತ ಶಾಸಕರ ವಿರುದ್ದ ವಾಗ್ದಾಳಿ ನಡೆಸಿದ ಶಾಸಕ ಎ.ಟಿ ರಾಮಸ್ವಾಮಿ, ನಮ್ಮ 15 ಶಾಸಕರು ರಾಜೀನಾಮೆ ಕೊಟ್ಟು ಮುಂಬೈಗೆ ಹೋಗಿದ್ದಾರೆ. ನಾವು ಮುಂದೆ ಸ್ಪರ್ಧಿಸುವುದಿಲ್ಲ ಅಂತಾರೆ. ನಾವು ಯಾವುದೇ ಆಸೆ ಆಮಿಷಕ್ಕೆ ಒಳಗಾಗಿಲ್ಲ. ಸ್ವಾಭಿಮಾನದಿಂದ ರಾಜೀನಾಮೆ ಕೊಟ್ಟಿದ್ದೇವೆ ಎಂದಿದ್ದಾರೆ.  ಸ್ವಾಭಿಮಾನವಿದ್ದರೇ ಯಾಕೆ ರಾಜ್ಯ ಬಿಟ್ಟು ಹೋಗಬೇಕು . ರಾಜ್ಯದ ಮಾನ ಮರ್ಯಾದೆಯನ್ನ ರಾಷ್ಟ್ರಪಟ್ಟದಲ್ಲಿ ಹರಾಜು ಹಾಕಿದ್ದಾರೆ. ನಿಮಗೆ ಇಲ್ಲಿ ರಕ್ಷಣೆ ಕೊಡುತ್ತಿರಲಿಲ್ಲವೇ.  ಸೇವೆ ಮಾಡುವ ಉದ್ದೇಶವಿದ್ದರೇ ಅಲ್ಲಿಗೆ ಏಕೆ ಹೋಗಬೇಕಿತ್ತು. ಇಲ್ಲಿ ಅಷ್ಟು ಅರಾಜಕತೆ ಸೃಷ್ಠಿಯಾಗುತ್ತದೆಯಾ..? ಎಂದು ಪ್ರಶ್ನಿಸಿದರು.

ಕಾಪಾಡುವ ದೇವರೇ ವಿಷ ಕೊಟ್ಟರೆ ಕಾಪಾಡುವವರು ಯಾರು?.

ಇದೇ ವೇಳೆ  ರಾಜ್ಯಪಾಲರ ನಡೆ ಪ್ರಶ್ನಿಸಿದ ಶಾಸಕ ಎ.ಟಿ ರಾಮಸ್ವಾಮಿ, ರಾಜ್ಯಪಾಲರು ಎರಡು ಬಾರಿ ನೋಟೀಸ್ ನೀಡಿದ್ದಾರೆ.  ನೊಟೀಸ್ ಕೊಟ್ಟಿದ್ದು ಒತ್ತಡದ ತಂತ್ರವೇ? ನಾವು ರಾಜಕಾರಣಿಗಳು, ತಂತ್ರಗಾರಿಕೆ ಮಾಡಬಹುದು. ಆದರೆ ಕಾರ್ಯಾಂಗದ ಮುಖ್ಯಸ್ಥರು ತಂತ್ರಗಾರಿಕೆ ಮಾಡಬಹುದೇ. ಕಾಪಾಡುವ ದೇವರೇ ವಿಷ ಕೊಟ್ಟರೆ ಕಾಪಾಡುವವರು ಯಾರು? ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಕ್ಷಾಂತರ ನಿಷೇಧ ಕಾಯ್ದೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನವೂ ನಡೆದಿದೆ. ಹೀಗಾಗಿ ಒಂದು ಐತಿಹಾಸಿಕ ನಿರ್ಣಯ ನೀವು ಮಾಡಬೇಕು ಎಂದು ಸ್ಪೀಕರ್ ಗೆ ಶಾಸಕ ಎ.ಟಿ.ರಾಮಸ್ವಾಮಿ ಮನವಿ ಮಾಡಿದರು.

ನಮ್ಮನ್ನ ನೋಡಿ ದೇವರೂ ಹೆದರಿ ಹೋಗಿದ್ದಾನೆ.

ದೇವರು ಯಡಿಯೂರಪ್ಪಗೆ ಬಲಗಡೆ ಹೂ ಕೊಟ್ಟಿದೆಯಂತೆ. ಸಿಎಂ ಆಗ್ತೀರಿ ಅಂತ ಹೂ ನೀಡಿದೆಯಂತೆ. ಸಿಎಂಗೂ ದೇವರು ಬಲಗಡೆ ಹೂ ಕೊಟ್ಟಿದ್ದಾನಂತೆ. ಹಾಗಾದ್ರೆ ಇಬ್ಬರೂ ಸಿಎಂ ಆಗೋಕೆ ಸಾಧ್ಯವೇ. ನಮ್ಮನ್ನ ನೋಡಿ ದೇವರೂ ಹೆದರಿ ಹೋಗಿದ್ದಾನೆ  ಎಂದು ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ  ವ್ಯಂಗ್ಯವಾಡಿದರು.

ಅತೃಪ್ತ ಶಾಸಕರಿಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿಕೊಟ್ಟ ಕುರಿತು ಪ್ರಶ್ನಿಸಿದ ಶಾಸಕ ರಾಮಸ್ವಾಮಿ,  ಶಾಸಕರಿಗೆ ಜೀರೋ ಟ್ರಾಪಿಕ್ ನೀಡಲಾಗಿದೆ. ಪ್ರೋಟೋ ಕಾಲ್ ನಲ್ಲಿ ಜೀರೋ ಟ್ರಾಫಿಕ್ ಇದೆಯೇ. ಅತೃಪ್ತರಿಗೆ ಅದೇಗೆ ಜೀರೋ ಟ್ರಾಫಿಕ್ ಕೊಟ್ರಿ ಅತೃಪ್ತ ಶಾಸಕರಿಗೆ ಜೀರೋ ಟ್ರಾಫಿಕ್ ಕೊಟ್ಟಿದ್ದು ಏಕೆ? ಗರ್ಭಿಣಿಗೆ ಜೀರೋ ಟ್ರಾಫಿಕ್ ಮಾಡಿಕೊಡ್ತೀರ. ಯಾರೂ ಕೈಕಾಲು ಮುರಿದುಕೊಂಡವರಿಗೆ ನೀವು ಮಾಡಿಕೊಡ್ತೀರ. ಕಾನೂನು, ಸಂವಿಧಾನಕ್ಕಿಂತ ದೊಡ್ಡವರು ಯಾರೂ ಇಲ್ಲ. ಯಾವ ಘನ ಉದ್ದೇಶಕ್ಕಾಗಿ ಜೀರೋ ಟ್ರಾಫಿಕ್ ಕೊಟ್ಟಿದ್ದೀರ. ಇದೊಂದು ಸಣ್ಣ ವಿಷಯವೇ ಅಲ್ಲ. ಗಂಭೀರವಾದ, ಘನವಾದ ವಿಷಯ ಗೌರ್ನರ್ ಕಚೇರಿಯಿಂದ ಸೂಚನೆಯಿಂದ ಮಾಡಿದ್ರಾ? ಎಂದು  ಅಸಮಾಧಾನ ವ್ಯಕ್ತಪಡಿಸಿದರು.

Key words: session- Sparks- against  rebel MLAs-A T Ramaswamy.