ಮೈಸೂರಿನ ಜಿಲ್ಲಾಸ್ಪತ್ರೆಯ ಡಾ.ಡಿ.ಆರ್.ಮಹದೇಶ್ವರ ಪ್ರಸಾದ್’ಗೆ ’ಸೀನಿಯರ್ ರಿಸರ್ಚ್ ಸೈಂಟಿಸ್ಟ್’ ಪ್ರಶಸ್ತಿ

kannada t-shirts

ಮೈಸೂರು, ನವೆಂಬರ್ 08, 2022 (www.justkannada.in): ಮೈಸೂರಿನ ಜಿಲ್ಲಾಸ್ಪತ್ರೆ ವೈದ್ಯರಾದ ಡಾ.ಡಿ.ಆರ್.ಮಹದೇಶ್ವರ ಪ್ರಸಾದ್ ಅವರು ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ’ಸೀನಿಯರ್ ರಿಸರ್ಚ್ ಸೈಂಟಿಸ್ಟ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮೈಸೂರು ಜಿಲ್ಲಾಸ್ಪತ್ರೆಯ ಫೋರೆನ್ಸಿಕ್ ಮೆಡಿಸಿನ್ ಮತ್ತು ಟಾಕ್ಸಿಕಾಲಜಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ.ಡಿ.ಆರ್.ಮಹದೇಶ್ವರ ಪ್ರಸಾದ್ ಅವರು ಕಳೆದ 25 ವರ್ಷಗಳಿಂದ ವಿಷ ಶಾಸ್ತ್ರ ವಿಷಯದಲ್ಲಿ ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಇತ್ತೀಚಿಗೆ ಮಂಗಳೂರಿನ ಕಸ್ತೂರಬಾ ಮೆಡಿಕಲ್ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ‘ದಿ ಇಂಡಿಯನ್ ಸೊಸೈಟಿ ಆಫ್ ಟಾಕ್ಸಿಕಾಲಜಿ’ ವತಿಯಿಂದ ಡಾ.ಡಿ.ಆರ್.ಮಹದೇಶ್ವರ ಪ್ರಸಾದ್ ಅವರಿಗೆ ’ಸೀನಿಯರ್ ರಿಸರ್ಚ್ ಸೈಂಟಿಸ್ಟ್’ ಪ್ರಶಸ್ತಿ ಪ್ರದಾನ ಮಾಡಿದೆ.

ಎಂಎಂಬಿಎಸ್, ಎಂಡಿ, ಪಿಎಚ್ ಡಿ ಪದವೀಧರರಾದ ಡಾ. ಡಿ.ಆರ್. ಮಹದೇಶ್ವರ ಪ್ರಸಾದ್ ಪ್ರಸಾದ್ ಅವರು ಕಳೆದ 25 ವರ್ಷಗಳಿಂದ ಆರೋಗ್ಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜತೆಗೆ ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿಯೂ ಸಕ್ರಿಯವಾಗಿ ಸೇವೆ ಸಲ್ಲಿಸಿ ಗಮನ ಸೆಳೆದಿದ್ದಾರೆ.

ಇದರ ಜತೆಗೆ ‘ವಿಷ ಶಾಸ್ತ್ರ’ ವಿಷಯದಲ್ಲಿ ಕಳೆದ ಹಲವಾರು ವರ್ಷಗಳಿಂದ ಸತತ ಸಂಶೋಧನೆ ನಡೆಸುತ್ತಿದ್ದಾರೆ. ಸಾಕಷ್ಟು ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪಾಲ್ಗೊಂಡು ವಿಚಾರ ಮಂಡನೆ ಮಾಡಿದ್ದಾರೆ. ಜತೆಗೆ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ.

 

website developers in mysore