ಹೊಸ ಪಕ್ಷ ಘೋಷಿಸಿದ ಹಿರಿಯ ನಾಯಕ ಗುಲಾಂ ನಬಿ ಅಜಾದ್.

Promotion

ಜಮ್ಮು ಕಾಶ್ಮೀರ,ಸೆಪ್ಟಂಬರ್,26,2022(www.justkannada.in): ಇತ್ತೀಚೆಗೆ ಕಾಂಗ್ರೆಸ್ ತೊರೆದಿದ್ಧ ಹಿರಿಯ ನಾಯಕ ಗುಲಾಂ ನಬಿ ಅಜಾದ್ ಇದೀಗ ಹೊಸ ಪಕ್ಷವನ್ನ ಘೋಷಣೆ ಮಾಡಿದ್ದಾರೆ.

ಗುಲಾಂ ನಬಿ ಆಜಾದ್ ಅವರು ಜಮ್ಮುವಿನಲ್ಲಿ ತಮ್ಮ ಹೊಸ ಪಕ್ಷವನ್ನು ಪ್ರಾರಂಭಿಸಿದ್ದು, ನೂತನ ಪಕ್ಷಕ್ಕೆ ‘ಡೆಮಾಕ್ರಟಿಕ್ ಆಜಾದ್ ಪಾರ್ಟಿ’ ಎಂದು ಘೋಷಿಸಿದ್ದಾರೆ. ಬಳಿಕ ಮಾತನಾಡಿದ ಗುಲಾಂ ನಬಿ ಅಜಾದ್,  ‘ನನ್ನ ಹೊಸ ಪಕ್ಷಕ್ಕಾಗಿ ಸುಮಾರು 1,500 ಹೆಸರುಗಳನ್ನು ಉರ್ದು, ಸಂಸ್ಕೃತದಲ್ಲಿ ನಮಗೆ ಕಳುಹಿಸಲಾಯಿತು. ಹಿಂದಿ ಮತ್ತು ಉರ್ದುವಿನ ಮಿಶ್ರಣ ‘ಹಿಂದೂಸ್ತಾನಿ’. ಈ ಹೆಸರು ಪ್ರಜಾಪ್ರಭುತ್ವ, ಶಾಂತಿಯುತ ಮತ್ತು ಸ್ವತಂತ್ರವಾಗಿರಬೇಕು ಎಂದು ನಾವು ಬಯಸುತ್ತೇವೆ ಎಂದರು.

ಕಾಂಗ್ರೆಸ್ ವಿರುದ್ಧ ಅಸಮಾಧಾನಗೊಂಡಿದ್ಧ ಗುಲಾಮ್ ನಬಿ ಅಜಾದ್ ಆಗಸ್ಟ್ 26 ರಂದು ಕಾಂಗ್ರೆಸ್ ಗೆ ಗುಡ್ ಬೈ ಹೇಳಿ ಹೊಸ ಪಕ್ಷ ಸ್ಥಾಪಿಸುವುದಾಗಿ ತಿಳಿಸಿದ್ದರು. ಇದೀಗ ಜಮ್ಮು ಮತ್ತು ಕಾಶ್ಮೀರದಲ್ಲಿ ‘ಡೆಮಾಕ್ರಟಿಕ್ ಆಜಾದ್ ಪಾರ್ಟಿ’ ಎಂಬ ಹೊಸ ಪಕ್ಷವನ್ನು ಪ್ರಾರಂಭಿಸಿದ್ದಾರೆ.

Key words: Senior leader- Ghulam Nabi Azad-announced-new party.