ಬಿತ್ತನೆ ಬೀಜ ಕಾಯ್ದೆ ಜಾರಿಯಾದ್ರೆ ರೈತರಿಗೆ ಮಾರಾಣಾಂತಿಕ ಹೊಡೆತ ಬೀಳಲಿದೆ- ಕುರುಬೂರು ಶಾಂತಕುಮಾರ್ ಅಸಮಾಧಾನ….

ಮೈಸೂರು,ಜ,25,2020(www.justkannada.in): ಕೇಂದ್ರ ಸರ್ಕಾರ ಬಿತ್ತನೆ ಬೀಜ ಕಾಯ್ದೆ ತರಲು ಹೊರಟಿದೆ. ಬಿತ್ತನೆ ಬೀಜ ಕಾಯ್ದೆ ಜಾರಿಯಾದ್ರೆ ರೈತರಿಗೆ ಮಾರಾಣಾಂತಿಕ ಹೊಡೆತ ಬೀಳಲಿದೆ ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಬಿತ್ತನೆ ಬೀಜ ಕಾಯ್ದೆ ಜಾರಿಯಾದ್ರೆ ಬೀಜ ಉತ್ಪಾದನೆ ಸೇರಿದಂತೆ ಎಲ್ಲ ಪ್ರಕ್ರಿಯೆಗಳು ಬಹುರಾಷ್ಟ್ರೀಯ ಕಂಪನಿಗಳ ಪಾಲಾಗಲಿವೆ. ಹೀಗಾಗಿ ಬೀಜ ಕಾಯ್ದೆಯ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡಲು ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ಜನವರಿ 30 ರಂದು ಮೈಸೂರಿನಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಹಲವಾರು ತಜ್ಞರು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಲಿದ್ದಾರೆ. ಸಂಕಿರಣದ ಚರ್ಚೆಯಾಗಿ ನಮ್ಮ ನಿಲುವನ್ನ ಸರ್ಕಾರಕ್ಕೆ ತಿಳಿಸಬೇಕಿದೆ‌ ಎಂದು ತಿಳಿಸಿದರು.

ರೈತರು ತಾವೆ ಬೀಜ ಉತ್ಪಾದನೆ ಮಾಡಿ ವ್ಯವಸಾಯ ಮಾಡುತ್ತಿದ್ದರು. ಈ ಕಾಯ್ದೆ ಬಂದರೆ ರೈತರು ಬಹುರಾಷ್ಟ್ರೀಯ ಕಂಪನಿಗಳ ಗುಲಾಮರಾಗಬೇಕಾಗುತ್ತದೆ. ಪರಂಪರಾನುಗತವಾಗಿ ಬಿತ್ತನೆ ಬೀಜಗಳನ್ನು ಬೇರೊಬ್ಬ ರೈತನಿಂದ ಖರೀದಿಸುತ್ತಿದ್ದರು. ಈ ಕಾಯ್ದೆ ಜಾರಿಯಾದ್ರೆ ಇದು ರೈತನಿಗೆ ಹೊಡೆತ ಬೀಳಲಿದೆ. ಬೀಜ ಉತ್ಪಾದನೆಯನ್ನ ಬಹುರಾಷ್ಟ್ರೀಯ ಕಂಪನಿಗಳು ಮಾಡುವುದರಿಂದ ಬೆಲೆ ತಾರತಮ್ಯ ಮಾಡುತ್ತವೆ. ಬೆಲೆ ನಿಯಂತ್ರಣ ಇಲ್ಲದೆ ತಮಗಿಷ್ಟ ಬಂದ ಬೆಲೆಯಲ್ಲಿ ಬೀಜ ಮಾರಟ ಮಾಡುತ್ತವೆ. ಇದರಿಂದ ರೈತರು ಸಂಕಷ್ಟ ಎದುರಾಗಲಿದೆ ಎಂದು ಕುರುಬೂರು ಶಾಂತಕುಮಾರ್  ಕಿಡಿಕಾರಿದರು.

Key words:  Seed Act –central govrnament- farmers-mysore- Kurubur Shantakumar