ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಕೊಲೆ ಬೆದರಿಕೆ ಕುರಿತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು ಹೀಗೆ…

ಬೆಂಗಳೂರು,ಜ,25,2020(www.justkannada.in):  ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಕೊಲೆ ಬೆದರಿಕೆ ಪತ್ರ ಬಂದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಜೀವ ಬೆದರಿಕೆ ಬಗ್ಗೆ ವಿವರ ಕೊಟ್ಟರೇ ತನಿಖೆ ನಡೆಸಲಾಗುತ್ತೆ ಎಂದು ತಿಳಿಸಿದ್ದಾರೆ.

ಹೆಚ್.ಡಿ ಕುಮಾರಸ್ವಾಮಿಗೆ ಕೊಲೆ ಬೆದರಿಕೆ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಗೃಹಸಚಿವ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂಗೆ ಎಷ್ಟು ಭದ್ರತೆ ಕೊಡಬೇಕೋ ಅಷ್ಟು ಭದ್ರತೆ ಕೊಟ್ಟಿದ್ದೇವೆ. ಜೀವ ಬೆದರಿಕೆ ಬಗ್ಗೆ ವಿವರ ಕೊಟ್ಟರೇ ತನಿಖೆ ಮಾಡುತ್ತೇವೆ ಎಂದರು.

ಹೆಚ್.ಡಿ ಕುಮಾರಸ್ವಾಮಿ ರಕ್ಷಣೆ ನಮ್ಮ ಆದ್ಯತೆ. ಈಗಾಗಲೇ ಭದ್ರತೆ ಕೊಟ್ಟಿದ್ದೇವೆ. ಸರ್ಕಾರದಿಂದ ಇನ್ನು ಹೆಚ್ಚು ಭದ್ರತೆ ಕೊಡಲಾಗುತ್ತದೆ. ಅವರು ಜೀವ ಬೆದರಿಕೆ ಬಗ್ಗೆ ವಿವರ ಕೊಡಬೇಕು ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

Key words: Home Minister -Basavaraja Bommai — murder threat – former CM -HD Kumaraswamy.