ಪೈಲ್ವಾನ್ ಚಿತ್ರದ ಎರಡನೇ ಹಾಡು ನಾಳೆ ರಿಲೀಸ್…

Promotion

ಬೆಂಗಳೂರು,ಜು,15: ‘ಪೈಲ್ವಾನ್’ ಚಿತ್ರದ ಎರಡನೇ ಹಾಡು ನಾಳೆ (ಮಂಗಳವಾರ) ಮಧ್ಯಾಹ್ನ ಬಿಡುಗಡೆ ಆಗಲಿದೆ. ಸಿನಿಮಾದ ರೋಮ್ಯಾಟಿಂಕ್ ಸಾಂಗ್ ಇದಾಗಿದೆ. ‘ಕಣ್ಮಣಿಯೇ…’ ಎಂಬ ಈ ಹಾಡನ್ನು ವಿ ನಾಗೇಂದ್ರ ಪ್ರಸಾದ್ ಬರೆದಿದ್ದಾರೆ.

‘ಬಂದ ನೋಡು ಪೈಲ್ವಾನ್…’ ಥೀಮ್ ಹಾಡು ಯೂ ಟ್ಯೂಬ್ ನಲ್ಲಿ ಒಂದು ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ. ಈ ಹಾಡಿನ ಬಳಿಕ ಸಿನಿಮಾದ ಎರಡನೇ ಹಾಡನ್ನು ಚಿತ್ರತಂಡ ರಿಲೀಸ್ ಮಾಡುತ್ತಿದೆ. ಅರ್ಜುನ್ ಜನ್ಯ ಸಿನಿಮಾಗೆ ಸಂಗೀತ ನೀಡಿದ್ದಾರೆ.

 

‘ಮಾಣಿಕ್ಯ’, ‘ಹೆಬ್ಬುಲಿ’ಯ ಸೂಪರ್ ಸಕ್ಸಸ್ ಬಳಿಕ ಮತ್ತೆ ಸುದೀಪ್ ಸಿನಿಮಾಗೆ ಜನ್ಯ ಮ್ಯೂಸಿಕ್ ನೀಡುತ್ತಿದ್ದಾರೆ. ಮೊದಲು ಬಿಡುಗಡೆಯಾದ ಥೀಮ್ ಸಾಂಗ್ ದೊಡ್ಡ ಪ್ರತಿಕ್ರಿಯೆ ಪಡೆದಿದ್ದು, ಅದೇ ಖುಷಿಯಲ್ಲಿ ಈ ಹಾಡು ಹೊರಬರುತ್ತಿದೆ.