ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಗಿಫ್ಟ್ ಕೊಟ್ಟ  ಚಿರಂಜೀವಿ ಸರ್ಜಾ ದಂಪತಿ…

ಬೆಂಗಳೂರು,ಜು,15: ಶ್ವಾನಪ್ರಿಯರಾಗಿರುವ ಚಿರು ಸರ್ಜಾ ಮತ್ತು ಪತ್ನಿ ಮೇಘನಾ ರಾಜ್ ಆಗಾಗ ತಮ್ಮ ಮುದ್ದಿನ ಶ್ವಾನಗಳ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುತ್ತಲೇ ಇರುತ್ತಾರೆ. ಇದೀಗ ಶ್ವಾನ ಪ್ರಿಯ ದಂಪತಿ ತಮ್ಮ ಮನೆಯ ಮುದ್ದಿನ ನಾಯಿ ಮರಿಯೊಂದನ್ನು ಡಿ ಬಾಸ್ ದರ್ಶನ್ ಗೆ ಗಿಫ್ಟ್ ಆಗಿ ನೀಡಿದ್ದಾರೆ.

ನಮ್ಮ ಮನೆಯ ಈ ಕ್ಯೂಟ್ ಪಪ್ಪಿ ಇನ್ನು ನಮ್ಮದೇ ಕುಟುಂಬದ ಬೇರೊಬ್ಬ ಸದಸ್ಯರ ಮನೆಗೆ ಶಿಫ್ಟ್ ಆಗಲಿದೆ ಎಂದು ಮೇಘನಾ ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು. ಅದರಂತೆ ಇದೀಗ ಆ ಕುಟುಂಬ ಸದಸ್ಯ ಬೇರೆ ಯಾರೂ ಅಲ್ಲ, ಡಿ ಬಾಸ್ ದರ್ಶನ್ ಎಂದು ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲ, ಚಿರು ಸರ್ಜಾ ತಮ್ಮ ಮುದ್ದಿನ ನಾಯಿ ಮರಿಯನ್ನು ದರ್ಶನ್ ಗೆ ಉಡುಗೊರೆಯಾಗಿ ನೀಡುತ್ತಿರುವ ಫೋಟೋವನ್ನೂ ಪ್ರಕಟಿಸಿದ್ದಾರೆ.

Chiranjeevi Sarja  gift Challenging Star Darshan.