ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ.

kannada t-shirts

ಬೆಂಗಳೂರು,ಫೆಬ್ರವರಿ,8,2022(www.justkannada.in):  ದ್ವಿತೀಯ ಪಿಯುಸಿ  ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನ ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದೆ.

ಏಪ್ರಿಲ್ 16 ರಿಂದ ಮೇ 6ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ. ಪ್ರಕಟಣೆಯಂತೆ ಏಪ್ರಿಲ್​ 16 ರಂದು ಗಣಿತ ವಿಷಯದ ಪರೀಕ್ಷೆ, ಏಪ್ರಿಲ್ 18 ರಂದು ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ ಪರೀಕ್ಷೆ ನಡೆಯಲಿದೆ. ಏಪ್ರಿಲ್ 20 ರಂದು ಇತಿಹಾಸ, ಭೌತಶಾಸ್ತ್ರ ಪರೀಕ್ಷೆ, ಏಪ್ರಿಲ್ 22 ರಂದು ತರ್ಕಶಾಸ್ತ್ರ ಪರೀಕ್ಷೆ, ಏಪ್ರಿಲ್ 23 ರಂದು ಮನಃಶಾಸ್ತ್ರ, ಕೆಮಿಸ್ಟ್ರಿ ಪರೀಕ್ಷೆ ನಡೆಯಲಿದೆ ಎಂದು ಹೇಳಲಾಗಿದೆ.

ಈಗಾಗಲೇ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು. ಈಗ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ದಿನಾಂಕ 16-04-2022 ರಿಂದ ದಿನಾಂಕ 06-05-2022ರವರೆಗೆ ಪರೀಕ್ಷೆ ನಡೆಯಲಿವೆ.

ದ್ವಿತೀಯ ಪಿಯು ಪರೀಕ್ಷೆಯ ಅಂತಿಮ ವೇಳಾಪಟ್ಟಿ ಈ ಕೆಳಕಂಡಂತಿದೆ.

ದಿನಾಂಕ 16-04-2022 – ಗಣಿತ, ಶಿಕ್ಷಣ ಶಾಸ್ತ್ರ, ಮೂಲ ಗಣಿತ

ದಿನಾಂಕ 17-04-2022ರಂದು ಭಾನುವಾರ ರಜೆ

ದಿನಾಂಕ 18-04-2022 – ರಾಜ್ಯ ಶಾಸ್ತ್ರ, ಸಂಖ್ಯಾಶಾಸ್ತ್ರ

ದಿನಾಂಕ 19-04-2022 – ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ ನೆಸ್

ದಿನಾಂಕ 20-04-2022 – ಇತಿಹಾಸ, ಭೌತಶಾಸ್ತ್ರ

ದಿನಾಂಕ 21-04-2022 – ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಅರೇಬಿಕ್, ಫ್ರೆಂಚ್

ದಿನಾಂಕ 22-04-2022ರ ಶುಕ್ರವಾರ – ತರ್ಕ ಶಾಸ್ತ್ರ, ವ್ಯವಹಾರ ಅಧ್ಯಯನ

ದಿನಾಂಕ 23-04-2022 – ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮನ: ಶಾಸ್ತ್ರ, ರಾಸಾಯನ ಶಾಸ್ತ್ರ

ದಿನಾಂಕ 24-04-2022 ರಂದು ಭಾನುವಾರ ರಜೆ

ದಿನಾಂಕ 25-04-2022 – ಅರ್ಥ ಶಾಸ್ತ್ರ

ದಿನಾಂಕ 26-04-2022 – ಹಿಂದಿ

ದಿನಾಂಕ 27-04-202ರಂದು ಬುಧವಾರ ಪರೀಕ್ಷೆ ಇಲ್ಲ

ದಿನಾಂಕ 28-04-2022 – ಕನ್ನಡ

ದಿನಾಂಕ 30-04-2022  – ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ

ದಿನಾಂಕ 02-05-2022 – ಭೂಗೋಳ ಶಾಸ್ತ್ರ, ಜೇವಶಾಸ್ತ್ರ

ದಿನಾಂಕ 04-05-2022 – ಇಂಗ್ಲೀಷ್

ದಿನಾಂಕ 06-05-2022 – ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ

Key words: Second PU-Exam- Final –time table

website developers in mysore