ಬೆಂಗಳೂರು ಉತ್ತರ ವಿವಿಗೆ ನೂತನ ಕುಲಪತಿ: ಹೆಸರು ಶಿಫಾರಸ್ಸು ಮಾಡಿದ ಸರ್ಚ್ ಕಮಿಟಿ..!

Promotion

 

ಬೆಂಗಳೂರು, ಸೆ.27, 2021 : (www.justkannada.in news) : ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯದ ನೂತನ ಕುಲಪತಿ ಆಯ್ಕೆ ಸಂಬಂಧ ರಚಿಸಲಾಗಿದ್ದ ಶೋಧನಾ ಸಮಿತಿ, ಮೂವರ ಹೆಸರನ್ನು ಶಿಫಾರಸ್ಸು ಮಾಡಿದೆ ಎಂದು ತಿಳಿದು ಬಂದಿದೆ.
ಪ್ರೊ.ಸಿದ್ದೇಗೌಡ ಅವರ ನೇತೃತ್ವದ, ಪ್ರೊ.ಇ.ಟಿ,ಪುಟ್ಟಯ್ಯ, ಪ್ರೊಪಟವರ್ಧನ್ ಅವರನ್ನು ಒಳಗೊಂಡಿದ್ದ ಶೋಧನಾ ಸಮಿತಿ ಮೂವರ ಹೆಸರನ್ನು ಸರಕಾರಕ್ಕೆ ಶಿಫಾರಸ್ಸು ಮಾಡಿದೆ.

ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಹಾಗೂ ಮಾಜಿ ಕುಲಸಚಿವ ಪ್ರೊ.ಬಿ.ಕೆ.ರವಿ, ರಾಸಾಯನ ಶಾಸ್ತ್ರ ಪ್ರಾಧ್ಯಾಪಕ , ಕುವೆಂಪು ವಿವಿ ಮಾಜಿ ರಿಜಿಸ್ಟ್ರಾರ್ ಪ್ರೊ. ಎಚ್.ಎಸ್. ಬೋಜ್ಯ ನಾಯ್ಕ್ ಅಥವಾ ಪ್ರೊ.ಪೂಣಚ್ಚ ಹಾಗೂ ಪ್ರೊ.ಮೈಲಾರಪ್ಪ ಅವರ ಹೆಸರನ್ನು ಸರ್ಚ್ ಕಮಿಟಿ ಶಿಫಾರಸ್ಸು ಮಾಡಿದೆ ಎನ್ನಲಾಗಿದೆ.

2015 ರಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯ ವಿಭಜನೆ ಬಳಿಕ ಅವಿಭಜಿತ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆ ಕೇಂದ್ರೀಕರಿಸಿ ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯ ಅಸ್ತಿತ್ವಕ್ಕೆ ಬಂದಿತು. ಬೆಂಗಳೂರು ಉತ್ತರ ವಿವಿಗೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸುಮಾರು 300 ಕ್ಕೂ ಹೆಚ್ಚು ಕಾಲೇಜು ಸೇರಿವೆ. ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಮೊದಲ ಕುಲಪತಿಯಾಗಿ ಡಾ.ಟಿ.ಡಿ.ಕೆಂಪರಾಜು ನೇಮಕಗೊಂಡಿದ್ದರು. ಇದೀಗ ಅವರ ಅವಧಿ ಮುಗಿದು, ಕಳೆದ ಒಂದೂವರೆ ತಿಂಗಳ ಹಿಂದೆ ನಿವೃತ್ತರಾದರು.

ಈ ಹಿನ್ನೆಲೆಯಲ್ಲಿ ನೂತನ ಕುಲಪತಿ ಆಯ್ಕೆಗೆ ಶೋಧನಾ ಸಮಿತಿ ರಚಿಸಲಾಗಿತ್ತು. ಇದೀಗ ಸರ್ಚ್ ಕಮಿಟಿ ನೂತನ ಕುಲಪತಿ ಹುದ್ದೆಗೆ ಹೆಸರು ಶಿಫಾರಸ್ಸು ಮಾಡಿದೆ ಎಂದು ಮೂಲಗಳು ಜಸ್ಟ್ ಕನ್ನಡಗೆ ತಿಳಿಸಿವೆ.

key words : search committee-recommends-three-names-to-Bangalore-north-university-vice.chancellor-post