ಕೇಂದ್ರ ಸರ್ಕಾರ ಮಾತುಕತೆಗೆ ಕರೆದರೆ ಸಿದ್ಧ- ರೈತ ಮುಖಂಡ ರಾಕೇಶ್ ಟಿಕಾಯತ್.

ನವದೆಹಲಿ,ಸೆಪ್ಟಂಬರ್,27,2021(www.justkannada.in):  ಕೇಂದ್ರದ ಕೃಷಿ ತಿದ್ಧುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ರೈತರ ಹೋರಾಟದ ಕಿಚ್ಚು ಜೋರಾಗಿದ್ದು, ಇಂದು ಭಾರತ್ ಬಂದ್ ಗೆ ಕರೆ ನೀಡಿ ಕೇಂದ್ರ ಸರ್ಕಾರದ ವಿರುದ್ಧ ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಗಾಜಿಪುರ ಗಡಿಯಲ್ಲಿ ಮಾತನಾಡಿರುವ ರೈತಮುಖಂಡ ರಾಕೇಶ್ ಟಿಕಾಯತ್, ಕೃಷಿ ತಿದ್ಧುಪಡಿ ಕಾಯ್ದೆಯನ್ನ ಸರ್ಕಾರ ಹಿಂಪಡೆಯಲೇಬೇಕು. ಕಾಯ್ದೆ ಹಿಂಪಡೆಯುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ. ಕೇಂಧ್ರ ಸರ್ಕಾರ ಮಾತುಕತೆಗೆ ಕರೆದರೆ ನಾವು ಸಿದ್ದರಿದ್ದೇವೆ ಎಂದು  ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.

ಹಾಗೆಯೇ ಭಾರತ್ ಬಂದ್ ಗೆ ಬೆಂಬಲಿಸಿರುವ ವಿಪಕ್ಷಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.  ಭಾರತ್ ಬಂದ್ ಬಿಸಿ ರಾಷ್ಟ್ರರಾಜಧಾನಿ ನವದೆಹಲಿಗೆ ತಟ್ಟಿದ್ದು, ದೆಹಲಿ ಪ್ರವೇಶಿಸುವ ಗಡಿಗಳನ್ನ ಬಂದ್ ಮಾಡಲಾಗಿದ್ದು ವಾಹನಗಳು ಸಾಲುಗಟ್ಟಿ ನಿಂತಿವೆ ಎನ್ನಲಾಗಿದೆ.

Key words:  central government -ready – talks-farmer leader -Rakesh Tikayat.