“ವಿಜ್ಞಾನದ ಅನುಕೂಲತೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಅಗತ್ಯ” : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

Promotion

ಮೈಸೂರು,ಮಾರ್ಚ್,08.2021(www.justkannada.in)  : ನಮ್ಮ ಜೀವನದಲ್ಲಿ ವಿಜ್ಞಾನದ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ರಾಷ್ಟ್ರೀಯ ವಿಜ್ಞಾನ ದಿನ ಆಚರಣೆಯ ಉದ್ದೇಶವಾಗಿದೆ. ಯುವ ಸಮುದಾಯಕ್ಕೆ ವಿಜ್ಞಾನದ ಅನುಕೂಲತೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.

science-Convenience-About-Awareness-Stirring-FunctionRequired-Chancellor-Prof.G.Hemant Kumar

ಮೈಸೂರು ವಿವಿಯ ಕ್ರಾಫರ್ಡ್ ಭವನದಲ್ಲಿ ವಿವಿ ವತಿಯಿಂದ ಆಯೋಜಿಸಿದ್ದ “ರಾಷ್ಟ್ರೀಯ ವಿಜ್ಞಾನ ದಿನಾಚರಣೆ” ಕಾರ್ಯಕ್ರಮವನ್ನು ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ವರ್ಷ ಫೆಬ್ರವರಿ ೨೮ನೇ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ. ವಿಜ್ಞಾನಕ್ಕೆ ಸಂಬಂಧಿಸಿದಂತೆ ಉಪನ್ಯಾಸಗಳು, ಚರ್ಚಾಸ್ಪರ್ಧೆಗಳು, ರಸಪ್ರಶ್ನೆ, ವಸ್ತುಪ್ರದರ್ಶನ – ಹೀಗೆ ಅನೇಕ ಚಟುವಟಿಕೆಗಳನ್ನು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಂದರ್ಭದಲ್ಲಿ ದೇಶದ ವಿವಿಧೆಡೆ ಹಮ್ಮಿಕೊಳ್ಳಲಾಗುತ್ತದೆ ಎಂದರು.

ಸರ್ ಸಿ.ವಿ.ರಾಮನ್ ಅವರ ಸಾಧನೆಯ ನೆನಪಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನ

ಪ್ರತೀ ವರ್ಷ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಚಟುವಟಿಕೆಗಳನ್ನು ಒಂದು ನಿರ್ದಿಷ್ಟ ವಿಷಯದ ಸುತ್ತ ಆಯೋಜಿಸಲಾಗುತ್ತದೆ. ಭಾರತದ ಹೆಮ್ಮೆಯ ವಿಜ್ಞಾನಿ ಸರ್ ಸಿ.ವಿ.ರಾಮನ್ ಅವರ ಅಪೂರ್ವ ಸಾಧನೆಯ ನೆನಪಿನಲ್ಲಿ ಈ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನ ಎಂದು ಗುರುತಿಸಲಾಗಿದೆ ಎಂದು ಸ್ಮರಿಸಿದರು.

ಸರ್ ಸಿ.ವಿ.ರಾಮನ್ ಅವರು ೧೯೨೮ರ ಫೆಬ್ರವರಿ ೨೮ರಂದು ‘ರಾಮನ್ ಇಫೆಕ್ಟ್’ ಎಂದೇ ಪ್ರಸಿದ್ಧವಾದ ತಮ್ಮ ಅಧ್ಯಯನದ ವಿವರಗಳನ್ನು ಜಗತ್ತಿಗೆ ತಿಳಿಸಿದರು. ವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಏಷ್ಯಾದ ಮೊತ್ತಮೊದಲ ವಿಜ್ಞಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಹೀಗಾಗಿ, ಈ ದಿನದಂದು ಅವರ ಸಾಧನೆಗಳನ್ನು ಯುವಸಮುದಾಯಕ್ಕೆ ತಿಳಿಸುವ ಕಾರ್ಯವಾಗಬೇಕು ಎಂದು ಹೇಳಿದರು.

‘ನಾಯಕತ್ವದಲ್ಲಿ ಮಹಿಳೆ : ಕೋವಿಡ್ ಪ್ರಪಂಚದಲ್ಲಿ ಸಮಾನ ಭವಿಷ್ಯ ಸಾಧನೆ’ ಎಂಬ ಘೋಷವಾಕ್ಯ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕುರಿತು ಮಾತನಾಡಿ, ಕುಟುಂಬ, ಸಮುದಾಯ, ಉತ್ತಮ ಸಮಾಜದ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಅಪಾರ. ಇದು ಒಂದು ದಿನಕಷ್ಟೇ ಸೀಮಿತವಲ್ಲ. ಪ್ರತಿದಿನವು ಮಹಿಳಾ ದಿನವಾಗಿರುತ್ತದೆ. ಮಹಿಳೆಯರ ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ಸಾಧನೆಗಳನ್ನು ಸ್ಮರಿಸುವುದಾಗಿದೆ ಎಂದರು.

ಕೊರೊನಾ ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಮಹಿಳೆಯರ ಪಾತ್ರ ಅಪಾರ

ಲಿಂಗ ಸಮಾನತೆಯ ಸಂದೇಶದೊಂದಿಗೆ, ವಿಶ್ವದಾದ್ಯಂತ ಮಹಿಳೆಯರ ಸಾಧನೆಯನ್ನು ಸ್ಮರಿಸಲಾಗುವುದು. ಈ ಬಾರಿ ‘ನಾಯಕತ್ವದಲ್ಲಿ ಮಹಿಳೆ : ಕೋವಿಡ್ ಪ್ರಪಂಚದಲ್ಲಿ ಸಮಾನ ಭವಿಷ್ಯ ಸಾಧನೆ’ ಎಂಬ ಘೋಷವಾಕ್ಯದೊಂದಿಗೆ ಈ ದಿನವನ್ನು ಆಚರಿಸಲಾಗುತ್ತಿದೆ. ಕೊರೊನಾ ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಮಹಿಳೆಯರ ಪಾತ್ರ ಅಪಾರ ಎಂದು ಹೇಳಿದರು.

science-Convenience-About-Awareness-Stirring-FunctionRequired-Chancellor-Prof.G.Hemant Kumar

ಆರಿಜನ್ ಡಿಸ್ಕವರಿ ಟೆಕ್ನಾಲಜಿಸ್ ನ  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಮುರುಳಿ ರಾಮಚಂದ್ರ ಅವರು “ಕ್ಯಾನ್ಸರ್ ಪ್ರತಿರೋಧಕ ಶಕ್ತಿ ವರ್ಧನೆಗೆ ಚಿಕಿತ್ಸೆ : ಪ್ರತಿಕಾಯಗಳಿಗೆ ಪರ್ಯಾಯವಾಗಿ ಸಣ್ಣ ಕಣ ಏಜೆಂಟ್ ಗಳಿಗೆ ಅವಕಾಶಗಳು” ವಿಷಯ ಕುರಿತು ಉಪನ್ಯಾಸ ನೀಡಿದರು.  ಕ್ಯಾನ್ಸರ್ ಚಿಕಿತ್ಸೆ, ಔಷಧಗಳು ಪರಿಣಾಮ ಕುರಿತಂತೆ ವಿವರವಾಗಿ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯ‌ ಕುಲಸಚಿವ ಪ್ರೊ.ಆರ್.ಶಿವಪ್ಪ ಉಪಸ್ಥಿತರಿದ್ದರು.

ENGLISH SUMMARY….

“Awareness should be created on science facilities: MoU VC
Mysuru, Mar. 08, 2021 (www.justkannada.in): “The objective of celebrating National Science Day is to create awareness among the citizens about the importance of science in our lives. There is a need to create awareness among the youth on the advantages of science,” opined Prof. G. Hemanth Kumar, Vice-Chancellor, University of Mysore.
He inaugurated the ‘National Science Day’ program held at the Crawford Bhavan in the University of Mysore today.
In his address, he said, “every year National Science Day is celebrated on February 28. The University has been conducting several programs every year on this day, including several seminars, debates, competitions, quiz, exhibition, etc., based on themes.science-Convenience-About-Awareness-Stirring-FunctionRequired-Chancellor-Prof.G.Hemant Kumar
He also wished on the occasion of the International Women’s Day.’ He appreciated the role of women in managing houses and for the achievements in all the sectors in the society. “Women’s Day is not only today, every day is Women’s Day,” he opined.
Prof. R. Shivappa, Registrar, University of Mysore was present on the occasion.
Keywords: Prof. G. Hemanth Kumar/ Vice-Chancellor/ National Science Day/ International Women’s Day/ University of Mysore

key words : science-Convenience-About-Awareness-Stirring-Function
Required-Chancellor-Prof.G.Hemant Kumar