ಪೋಷಕರ ಒಪ್ಪಿಗೆ ಬಳಿಕವೇ ಶಾಲೆ ಆರಂಭ : ಸಿಎಂ ಬಿ.ಎಸ್.ವೈ ಸ್ಪಷ್ಟ

Promotion

ಬೆಂಗಳೂರು,ಅಕ್ಟೋಬರ್,09,2020(www.justkannada.in) : ಪೋಷಕರ ಒಪ್ಪಿಗೆ ಬಳಿಕವೇ ಶಾಲೆ ಆರಂಭಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.jk-logo-justkannada-logoಶಾಲೆ ಆರಂಭ ಸಂಬಂಧಿಸಿದ ಗೊಂದಲಗಳಿಗೆ ಬಿಎಸ್ ವೈ ತೆರೆ ಎಳೆದಿದ್ದಾರೆ. ಸಿಎಂ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಸಿಎಂ ಬಿಎಸ್ ವೈ ಗುಡ್ ನ್ಯೂಸ್ ನೀಡಿದ್ದು, ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಜ್ಞರ ಅಭಿಪ್ರಾಯ ಪಡೆದು ಪಾಲಕರ ಸಮ್ಮತಿ ಬಳಿಕವೇ ಶಾಲೆ ಆರಂಭಿಸುವುದಾಗಿ ಮಾಹಿತಿ ನೀಡಿದ್ದಾರೆ.School,starts,only,after,parental,consent,CM B.S.yediyurappa,clear

ಶಾಲೆ ಆರಂಭಕ್ಕೆ ಯಾವುದೇ ತರಾತುರಿ ಇಲ್ಲ. ಈಗಾಗಲೇ ಈ ಕುರಿತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದು, ಅಕ್ಟೋಬರ್ ತಿಂಗಳ ಅಂತ್ಯಕ್ಕೆ ಪರಿಸ್ಥಿತಿ ನೋಡಿಕೊಂಡು ತಜ್ಞರ ಜತೆ ಚರ್ಚಿಸಿದ ಬಳಿಕವಷ್ಟೇ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

key words : School-starts-only-after-parental-consent-CM B.S.yediyurappa-clear