Thursday, August 20, 2026

BDA Apartments

Home Front Page ಪಾಸ್ವಾನ್ ಅಂತಿಮ ದರ್ಶನ ಪಡೆದ ಮೋದಿ, ಜೆಪಿ ನಡ್ಡಾ

ಪಾಸ್ವಾನ್ ಅಂತಿಮ ದರ್ಶನ ಪಡೆದ ಮೋದಿ, ಜೆಪಿ ನಡ್ಡಾ

ನವದೆಹಲಿ, ಅಕ್ಟೋಬರ್ 09, 2020 (www.justkannada.in): ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಮೃತದೇಹವನ್ನು ಏಮ್ಸ್ ಆಸ್ಪತ್ರೆಯಿಂದ ಅವರ ನಿವಾಸಕ್ಕೆ ಕರೆತಂದು ಗಣ್ಯರ ದರ್ಶನಕ್ಕೆ ಇಡಲಾಗಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಅವರು ಪಾಸ್ವಾನ್ ಅಂತಿಮ ದರ್ಶನ ಪಡೆದರು. ಎಲ್ ಜೆಪಿ ನಾಯಕ 74 ವರ್ಷದ ರಾಮ್ ವಿಲಾಸ್ ಪಾಸ್ವಾನ್ ಅವರು ಇತ್ತೀಚೆಗೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದರು.

ರಾಮ್ ವಿಲಾಸ್ ಪಾಸ್ವಾನ್ ನಿಧನ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನ, ಸಂಸತ್ತು, ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಶೋಕಾಚರಣೆ ಮಾಡಲಾಗುತ್ತಿದೆ. ರಾಷ್ಟ್ರಪತಿ ಭವನ ಮತ್ತು ಸಂಸತ್ತಿನ ಕಟ್ಟಡಗಳಲ್ಲಿ ದೇಶದ ಬಾವುಟವನ್ನು ಇಂದು ಅರ್ಧ ಮಟ್ಟಕ್ಕೆ ಇಳಿಸಲಾಗಿದೆ.