ಜ.31ರವರೆಗೂ ಬೆಂಗಳೂರಿನಲ್ಲಿ ಶಾಲೆಗಳು ಬಂದ್.

Promotion

ಬೆಂಗಳೂರು,ಜನವರಿ,12,2022(www.justkannada.in):  ಕೊರೊನಾ ಹೆಚ್ಚಳ ಹಿನ್ನೆಲೆ ಬೆಂಗಳೂರಿನಲ್ಲಿ  1ರಿಂದ 9ನೇ ತರಗತಿ ಶಾಲೆ ಬಂದ್ ಅವಧಿ ವಿಸ್ತರಣೆ ಮಾಡಲಾಗಿದೆ.

ಬೆಂಗಳೂರಿನಲ್ಲಿ ಜನವರಿ 31ರವರೆಗೂ ಶಾಲೆಗಳು ಬಂದ್ ಆಗಲಿವೆ. ಕೊರೋನಾ ಹೆಚ್ಚಳ ಹಿನ್ನೆಲೆ ಶಾಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳ ಕುರಿತು ಇಂದು ಅಧಿಕಾರಿಗಳ ಜತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸಭೆ ನಡೆಸಿದರು. ಸಭೆ ಬಳಿಕ ಮಾತನಾಡಿದ ಅವರು, ಜನವರಿ 19ರವರೆಗೆ ಬೆಂಗಳೂರಿನಲ್ಲಿ ಶಾಲೆಗಳು ಬಂದ್ ಮಾಡಿಲಾಗಿದ್ದು ಈ ಅವಧಿಯನ್ನ ಜನವರಿ 31ರವರೆಗೆ ವಿಸ್ತರಿಸಲಾಗಿದೆ. 1ರಿಂ 9ನೇ ತರಗತಿ ಶಾಲೆ ಬೆಂಗಳೂರಿನಲ್ಲಿ ಜನವರಿ 31ರವರೆಗೆ ಬಂದ್ ಆಗಲಿದೆ. 10,11,12 ತರಗತಿ ನಡೆಯಲಿವೆ ಎಂದಿದ್ದಾರೆ.

ರಾಜ್ಯದಲ್ಲಿ ಸಂಪೂರ್ಣ ಶಾಲೆ ಬಂದ್ ಇಲ್ಲ. ಶಾಲೆಗಳಲ್ಲಿ ಕೊರೋನಾ ಹರಡದಂತೆ ನಿಗಾ ವಹಸಿದ್ದೇವೆ. ಮಂಡ್ಯ ಮೈಸೂರು ಬೆಳಗಾವಿ ಭಾಗದಲ್ಲಿ ನಿಗಾ ವಹಿಸುತ್ತೇವೆ.ಕೊರೋನಾ ಕೇಸ್ ಜಾಸ್ತಿ ಇದ್ದ ಕಡೆ ಹೆಚ್ಚಿನ ನಿಗಾ ಇಟ್ಟಿದ್ದೇವೆ. ಅಯಾ ಡಿಸಿಗಳಿಗೆ ಹೆಚ್ಚಿನ ಅಧಿಕಾರ ಕೊಟ್ಟಿದ್ದೇವೆ. ಶಾಲೆಗಳಿಗೆ ಭೇಟಿ ನೀಡಲು ತಹಶೀಲ್ದಾರ್ ಹಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಬಿ.ಸಿ ನಾಗೇಶ್ ತಿಳಿಸಿದರು.

Key words: Schools bandh- Bangalore- till- 31st January.