ಬಸ್ ಗಾಗಿ ಕಾಯುತ್ತಿದ್ದ ಶಾಲಾ ಶಿಕ್ಷಕಿ ದುಷ್ಕರ್ಮಿಗಳ ಗುಂಡೇಟಿಗೆ ಬಲಿ…

Promotion

ಕೊಡಗು,ಜೂ,14,2019(www.justkannada.in):   ಬಸ್ ಗಾಗಿ ಕಾಯುತ್ತಿದ್ದ ಶಾಲಾ ಶಿಕ್ಷಕಿ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿ ಕೊಲೆಗೈದಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನಲ್ಲಿ ನಡೆದಿದೆ.

ವೀರಾಜಪೇಟೆ ತಾಲ್ಲೂಕು ಬಾಳಲೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಲಯನ್ಸ್ ಶಾಲೆಯ ಶಿಕ್ಷಕಿ ಅದೇಂಗಡ  ಆಶಾ ಕಾವೇರಮ್ಮ(50) ಮೃತಪಟ್ಟವರು. ಬಾಳಲೆ ಪೊಲೀಸ್ ಉಪಠಾಣೆ ಸಮೀಪ ಈ ಘಟನೆ ನಡೆದಿದೆ. ಶಿಕ್ಷಕಿ ಆಶಾ ಕಾವೇರಮ್ಮ ಸ್ಕೂಲ್ ಬಸ್ ಗಾಗಿ ಕಾಯುತ್ತಿದ್ದ ವೇಳೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಜಗದೀಶ್ ಎಂಬಾತ ಗುಂಡು ಹಾರಿಸಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

ಘಟನೆಯಲ್ಲಿ ಆಶಾ ಕಾವೇರಮ್ಮ ಸಾವನ್ನಪ್ಪಿದ್ದು ಈ ವೇಳೆ ಆಶಾಕಾವೇರಮ್ಮರನ್ನ ರಕ್ಷಿಸಲು ಹೋದ ದಿನೇಶ್  ಎಂಬುವವರಿಗೆ ಗಾಯವಾಗಿದೆ. ಶಿಕ್ಷಕಿ ಕೊಲೆಗೆ ಕಾರಣವೇನೆಂಬುದು ತಿಳಿದು ಬಂದಿಲ್ಲ. ಬಾಳಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Key words:  school teacher – murder-firing-kodagu