ವಿಜಯ್ ‘ತಳಪತಿ 63’ಗೆ ರಾಕುಲ್ ಹೀರೋಹಿನ್ !

ಬೆಂಗಳೂರು, ಜೂನ್ 14, 2019 (www.justkannada.in): ಸೂಪರ್ ಸ್ಟಾರ್ ವಿಜಯ್ ‘ತಳಪತಿ 63’ ಚಿತ್ರೀಕರಣದಲ್ಲಿ  ಬ್ಯೂಸಿಯಾಗಿದ್ದಾರೆ. ಇನ್ನು ಚಿತ್ರಕ್ಕೆ ನಾಯಕಿಯೂ ಆಯ್ಕೆಯಾಗಿದ್ದಾರೆ.

ಈ ಚಿತ್ರವನ್ನು ಅಟ್ಲಿ ನಿರ್ದೇಶನ ಮಾಡುತ್ತಿದ್ದು, ಎನ್ ಜಿಕೆ ಹೀರೋಯಿನ್ ರಾಕುಲ್ ಪ್ರೀತ್ ಸಿಂಗ್ ತಳಪತಿ ಚಿತ್ರದ ನಾಯಕಿಯಾಗಿದ್ದಾರೆ. ರಾಕುಲ್ ಈಗಾಗಲೇ ಸಾಕಷ್ಟು ಬಾರಿ ವಿಜಯ್ ಜೊತೆ ನಟಿಸುವ ಆಸೆ ವ್ಯಕ್ತಪಡಿಸಿದ್ದರು.

‘ನನಗೆ ವಿಜಯ್ ಅವರ ಡ್ಯಾನ್ಸ್ ಅಂದ್ರೆ ಇಷ್ಟ. ಮೊದಲನೆಯ ಚಿತ್ರದಿಂದ ಇಲ್ಲಿಯ ತನಕ ಮಾಡಿರುವ ವಿಜಯ್ ಎಲ್ಲಾ ಚಿತ್ರಗಳು ಸೂಪರ್ ಹಿಟ್. ಅವರು ಅಂದಿನಿಂದಲೂ ಹಾಗೇ ಇದ್ದಾರೆ. ನನಗೆ ಅವರ ಜೊತೆ ಕೆಲಸ ಮಾಡಲು ಬಹಳ ಇಷ್ಟ’ ಎಂದು ಹೇಳಿದ್ದರು. ಇದೀಗ ಆ ಚಾನ್ಸ್ ಸಿಕ್ಕಿದೆ.