ಹಂತ ಹಂತವಾಗಿ ಶಾಲೆ ಆರಂಭ: ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ- ಗೃಹ ಸಚಿವ ಅರಗ ಜ್ಞಾನೇಂದ್ರ

Promotion

ಬೆಂಗಳೂರು,ಫೆಬ್ರವರಿ,11,2022(www.justkannada.in):  ರಾಜ್ಯದಲ್ಲಿ ಹಂತ ಹಂತವಾಗಿ ಶಾಲೆಗಳನ್ನ ಆರಂಭ ಮಾಡಲಾಗುತ್ತದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಶಾಲೆ ಕಾಲೇಜು ಆರಂಭ  ಬಿಗಿ ಭದ್ರತೆ ಕುರಿತು ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಸೋಮವಾರದಿಂದ 10ನೇ ತರಗತಿವರೆಗೆ ಶಾಲೆಗಳನ್ನ ಆರಂಭಿಸಲಾಗುತ್ತದೆ.   ಪೊಲೀಸರು ಮುನ್ನೆಚ್ಚರಿಕಾ ಕ್ರಮ ತೆಗೆದುಕೊಂಡಿದ್ದಾರೆ. ಶಾಲೆ ಆರಂಭದ ದಿನ ಅಹಿತಕರ ಘಟನೆ  ನಡೆಸದಂತೆ ಕ್ರಮ ಕೈಗೊಳ್ಳಲಾಗಿದೆ. ಸೂಕ್ಷ್ಮ ಅತಿಸೂಕ್ಷ್ಮ ಪ್ರದೇಶದ ಶಾಲೆ ಗುರುತಿಸಲಾಗಿದೆ. ಪೊಲೀಸ್ ಬಿಗಿ ಭದ್ರತೆಯಲ್ಲಿ ಶಾಲೆ ಆರಂಭಕ್ಕೆ ಸೂಚನೆ ನೀಡಲಾಗಿದೆ ಎಂದರು.

ಎಲ್ಲಾ ಜಿಲ್ಲೆಗಳ ಎಸ್ಪಿಗಳಿಗೆ ಸೂಚನೆ ನೀಡಲಾಗಿದೆ ವಿದ್ಯಾರ್ಥಿಗಳು ತಲೆ ಕೆಡಿಸಿಕೊಳ್ಳಬಾರದು ವಿಧ್ಯಾಭ್ಯಾಸ ಪರೀಕ್ಷೆ ಬಗ್ಗೆ ಗಮನಿಸಬೇಕು ಎಂದು ಅರಗ ಜ್ಞಾನೇಂದ್ರ ಕಿವಿಮಾತು ಹೇಳಿದರು.

Key words: school-start-action-Home Minister-Araga Jnanendra

ENGLISH SUMMARY…

Schools to be opened in phases: Schools instructed to be alert and prevent any untoward incidents – Home Minister Araga Gnanendra
Bengaluru, February 11, 2022 (www.justkannada.in): Home Minister Araga Gnanendra today informed that the schools in the State will be opened in phases and schools have been instructed to be alert and prevent any untoward incidents.
Speaking about the security of the students in schools and colleges the Home Minister said classes up to the 10th standard will be started from Monday. “The police have taken all precautionary measures. All measures have been taken to prevent any untoward incidents. Schools in sensitive and micro sensitive areas have been identified. Schools will be opened under tight police security,” he explained.
“Instructions have been given to all the SPs and students don’t need to panic. They should concentrate on preparation for the exams,” he added.
Keywords: Home Minister Araga Gnanendra/ schools/ open/ from Monday