ಆ.5ರೊಳಗೆ ಮೂವರು ಹತ್ಯೆ ಆರೋಪಿಗಳ ಬಂಧಿಸದಿದ್ರೆ ಸತ್ಯಾಗ್ರಹ-ಸರ್ಕಾರಕ್ಕೆ ಗಡುವು ನೀಡಿದ ಹೆಚ್.ಡಿಕೆ.

Promotion

ಮಂಗಳೂರು,ಆ,1,2022(www.justkannada.in):  ಆಗಸ್ಟ್ 5ರೊಳಗೆ ಹಿಂದೂ ಮುಖಂಡ ಪ್ರವೀಣ್ ನೆಟ್ಟಾರು, ಮಸೂದ್ ಹಾಗೂ ಪಾಜಿಲ್ ಹತ್ಯೆ ಪ್ರಕರಣದ ಆರೋಪಿಗಳನ್ನ ಬಂಧಿಸದಿದ್ದರೇ ಸತ್ಯಾಗ್ರಹ ಮಾಡುತ್ತೇನೆ ಎಂದು ಸರ್ಕಾರಕ್ಕೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಹೆಚ್.ಡಿ ಕುಮಾರಸ್ವಾಮಿ  ಸಿಎಂ ಮಂಗಳೂರಿನಲ್ಲೇ ಇದ್ದಾಗ ಫಾಜಿಲ್ ಕೊಲೆಯಾದರು. ಸಿಎಂ ಭೇಟಿಯಾಗಿ ಆಶ್ವಾಸನೇ ನೀಡಬೇಕಿತ್ತು. ಯಾರನ್ನ ಮೆಚ್ಚಿಸಲು ನೀವು ಸಿಎಂ ಆಗಿದ್ದೀರಾ. ಕರುವನ್ನ ಸಾಕುತ್ತಿದ್ದ ಮಸೂದ್ ಹತ್ಯೆಗೈದರು. ಸರ್ಕಾರಕ್ಕೆ ನಾನು ಆಗಸ್ಟ್ 5 ರವರೆಗೂ ಗಡುವು ನೀಡುತ್ತೇನೆ. ಆರೋಪಿಗಳನ್ನ ಬಂಧಿಸಬೇಕು. ಇಲ್ಲದಿದ್ದರೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸತ್ಯಾಗ್ರಹ ಮಾಡುತ್ತೇನೆ. ಸಮಾನ ಮನಸ್ಕರು ಬೆಂಬಲಿಸಬೇಕು ಎಂದರು.

ಡಿಜಿ, ಐಜಿಪಿ ಪ್ರವೀಣ್ ಸೂದ್ ವಿರುದ್ಧ ಕಿಡಿಕಾರಿದ ಹೆಚ್.ಡಿಕೆ, ಸಂದೇಶ ಕೊಡಲು ಬಂದಿದ್ದಾರೆ ಎಂದುಕೊಂಡೆ. ಆದರೆ ಅವರು ಘಟನೆ ನಡೆದ ದಿನವೇ ಬರಬೇಕಿತ್ತು. ಆದರೆ ಬರಲಿಲ್ಲ. ಬೆಂಗಳೂರಿನಲ್ಲಿ ಏನು ಘನಂದಾರಿ ಕೆಲಸ ಇತ್ತು ಇವರಿಗೆ . ಈಗ  ಬಂದು ಆರ್ ಎಸ್ ಎಸ್ ಸಲಹೆ ಪಡೆದು ಹೋಗಿದ್ದಾರೆ ಎಂದು ಹರಿಹಾಯ್ದರು.

Key words: Satyagraha – three murder -accused – not arrest- August 5-HDK