ಸಿಎಂ ಟೀಕಿಸುವ ಬರದಲ್ಲಿ ನಟ ಪುನೀತ್ ಗೆ ಅಪಮಾನ..? ಚಕ್ರವರ್ತಿ ಸೂಲಿಬೆಲೆ ವಿರುದ್ಧ ಅಪ್ಪು ಫ್ಯಾನ್ಸ್ ಆಕ್ರೋಶ.

ಬೆಂಗಳೂರು,ಆ,1,2022(www.justkannada.in):  ಸಿಎಂ ಟೀಕಿಸುವ ಬರದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರು ನಟ ಪುನೀತ್ ರಾಜ್ ಕುಮಾರ್ ಗೆ ಅಪಮಾನಿಸಿದ್ದಾರೆ ಎನ್ನಲಾಗಿದೆ.

ಹೌದು, ಟ್ವೀಟ್ ಮಾಡಿ ಸಿಎಂ ಟೀಕಿಸಿದ್ದ ಚಕ್ರವರ್ತಿ ಸೂಲಿಬೆಲೆ ಅವರು ನಟ ಪುನೀತ್​ ರಾಜ್ ​ಕುಮಾರ್​ ಅವರ ಸಾವನ್ನು ಉದಾಹರಣೆಯಾಗಿ ನೀಡಿದ್ದಾರೆ.  ಶಾಸಕರ ಫೈಲ್ ಗೆ ಸಹಿ ಮಾಡಲು  ಸಿಎಂ ಬೊಮ್ಮಾಯಿ ಅವರಿಗೆ ಸಮಯ ಸಿಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ಸಿಎಂ ಬೊಮ್ಮಾಯಿ ಅವರು ಎಲ್ಲಾ ಸಿನಿಮಾಗಳ ಪ್ರೀಮಿಯರ್​​ ಶೋ ನೋಡಲು ಹೋಗುತ್ತಿದ್ದಾರೆ. May be ಓರ್ವ ಸಿನಿಮಾ ನಟ ಮೃತ್ತಪಟ್ಟಾಗ ಮೂರು ಮೂರು ದಿನ ಅಲ್ಲೇ ಇರ್ತಾರೆ ಎಂದು ಚಕ್ರವರ್ತಿ ಸೂಲಿಬೆಲೆ ಟ್ವೀಟ್ ಮಾಡಿದ್ದರು.

ಇದೀಗ  ಚಕ್ರವರ್ತಿ ಸೂಲಿಬೆಲೆ ಅವರ ಟ್ವಿಟ್ ನಿಂದ ಅಕ್ರೋಶಗೊಂಡ ಅಪ್ಪು ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ  ಕಿಡಿಕಾರಿದ್ದಾರೆ. ಇನ್ನು ಪವರ್ ಸ್ಟಾರ್ ಅಭಿಮಾನಿಗಳ ಆಕ್ರೋಶಕ್ಕೆ ಮಣಿದ ಚಕ್ರವರ್ತಿ ಸೂಲಿಬೆಲೆ ಕ್ಷಮೆ ಕೋರಿದ್ದಾರೆ ಎನ್ನಲಾಗಿದೆ.

Key words: insult – actor –Punith rajkumar- Appu- fans – against -Chakraborty Sulibele.