ಸ್ಯಾಂಟ್ರೋ ರವಿಯನ್ನ ಪುಣೆಯಿಂದ ಗುಜರಾತ್ ಕರೆದುಕೊಂಡು ಹೋಗಿದ್ದು ಯಾರು..? ಪ್ರಾಮಾಣಿಕ ತನಿಖೆಯಾಗಲಿ-ಹೆಚ್.ಡಿಕೆ ಆಗ್ರಹ.

Promotion

ಬೆಂಗಳೂರು,ಜನವರಿ,14,2023(www.justkannada.in):  ನಿನ್ನ ಸ್ಯಾಂಟ್ರೋ ರವಿಯನ್ನ ಬಂಧಿಸಲಾಗಿದ್ದು ಆತನನ್ನು ಪುಣೆಯಿಂದ ಗುಜರಾತ್ ಗೆ ಕರೆದುಕೊಂಡು ಹೋಗಿದ್ದು ಯಾರು..? ಸರ್ಕಾರ ಪ್ರಾಮಾಣಿಕ ತನಿಖೆ ನಡೆಸಿ ಸತ್ಯ ಹೇಳಲಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿದರು.

ಇಂದು ಬೆಂಗಳೂರಿನಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಸ್ಯಾಂಟ್ರೋ ರವಿ  ಪುಣೆಯಿಂದ ಗುಜರಾತ್ ಗೆ ಹೇಗೆ ಹೋಗಿದ್ದಾನೆ.  ಗೃಹ ಸಚಿವರು ಈ ವೇಳೆ ಅಲ್ಲಿ ಯಾಕೆ ಹೋದರು. ಸ್ಯಾಂಟ್ರೋ ರವಿ ಪುಣೆಯಲ್ಲಿ ಇರೋದು ಗೊತ್ತಿತ್ತು .ಆದರೂ ಯಾಕೆ ಬಂಧಿಸಲಿಲ್ಲ. ಇದಕ್ಕೆ ದಾಖಲೆ ಕೊಡೋಕೆ ಆಗುತ್ತಾ..?  ಎಂದು ಪ್ರಶ್ನಿಸಿದರು.

ಗೃಹ ಸಚಿವರು ಸಬರಮತಿ ಆಶ್ರಮಕ್ಕೆ ಹೋಗಿದ್ದ ಫೊಟೋ ಬಿಡುಗಡೆ ಮಾಡಿದರು. ಮತ್ತೇನೂ ಹೆಚ್ಚು ಕಮ್ಮಿ ಆಗಬಾರದು ಎಂದು ಫೊಟೋ ಬಿಟ್ಟಿದ್ದಾರೆ. ಅಂತಹ ದುಷ್ಪರಿಣಾಮಗಳನ್ನು ಸರಿಪಡಿಸಿಕೊಳ್ಳುವ ಉದ್ದೇಶದಿಂದ ನಾನು ಸರ್ಕಾರಕ್ಕೆ ಸಲಹೆ ಎಚ್ಚರಿಕೆ‌ ಕೊಡುತ್ತಾ ಬಂದಿದ್ದೇನೆ. ಸ್ಯಾಂಟ್ರೋ ರವಿಯಂತವರು ಬೇಕಾದಷ್ಟು ಮಂದಿ ಇದ್ದಾರೆ. ಅದರಲ್ಲಿ ಇವನ್ನೊಬ್ಬ ಅಷ್ಟೇ ಎಂದು ಹೆಚ್.ಡಿಕೆ ಹೇಳಿದರು.

ನನಗೆ ಬಂದ ವರದಿ ಪ್ರಕಾರ ಅವನು ಮೊದಲು ಉಡುಪಿ ಹಾಗೂ ಕೇರಳದಲ್ಲಿದ್ದ. ಅಲ್ಲಿಂದ ಅಲ್ಲಿಂದ ಪುಣೆಗೆ ಹೋದ. ಬಳಿಕ ಪುಣೆದಿಂದ ಅವನನ್ನ ಗುಜರಾತಿಗೆ ಯಾರು ಕರೆದುಕೊಂಡು ಹೋದರು. ಸರ್ಕಾರ ಪ್ರಾಮಾಣಿಕ ತನಿಖೆ ನಡೆಸಿ ಸತ್ಯ ಹೇಳಲಿ. ಪುಣೆನಲ್ಲಿದ್ದವನನ್ನು ಅವರೇ ಏಕೆ ಕರೆದುಕೊಂಡು ಹೋದರು? ಪುಣೆಯಲ್ಲಿ ಅವನಿಗೆ ಹೇಳಿದ್ದೇನು..? ಗುಜರಾತಿನಿಂದ ಹೇಗೆ ವಿಮಾನ ಹತ್ತಿಸಿದ್ರು ಅದೆಲ್ಲ ಹೇಳಲಿ ಎಂದು ಹೆಚ್.ಡಿಕೆ ಆಗ್ರಹಿಸಿದರು.

Key words:  Santro -Ravi- Pune – Gujarat- investigation-HD Kumaraswamy