ಸ್ಯಾಂಟ್ರೋ ರವಿ ಕೇಸ್ ದಾಖಲೆ ಪತ್ರಗಳನ್ನ ಸಿಐಡಿ ಅಧಿಕಾರಿಗಳಿಗೆ ವರ್ಗಾಯಿಸಿದ್ದೇವೆ-ಮೈಸೂರು ಪೊಲೀಸ್ ಆಯುಕ್ತ ರಮೇಶ್ ಬಾನೋತ್.

Promotion

ಮೈಸೂರು,ಜನವರಿ,17,2023(www.justkannada.in):  ಸ್ಯಾಂಟ್ರೋ ರವಿ ಪ್ರಕರಣವನ್ನ ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ. ಹೀಗಾಗಿ ಕೇಸ್ ನ ದಾಖಲೆ ಪತ್ರಗಳನ್ನ ಸಿಐಡಿ ಅಧಿಕಾರಿಗಳಿಗೆ ವರ್ಗಾಯಿಸಿದ್ದೇವೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಸರ್ಕಾರದ ಆದೇಶದಂತೆ ಸಿಐಡಿ ಅಧಿಕಾರಿಗಳು ಮೈಸೂರಿಗೆ ಬಂದಿದ್ದಾರೆ. ಸಿಐಡಿ ಅಧಿಕಾರಿಗಳಿಗೆ ದಾಖಲೆ ಹಸ್ತಾಂತರಿಸಿದ್ದೇವೆ. ತನಿಖಾಧಿಕಾರಿ ಬದಲಾಗಿದ್ದರಿಂದ ನಮ್ಮ ಪಾತ್ರ ಇರುವುದಿಲ್ಲ ಸ್ಥಳೀಯವಾಗಿ ಸಿಐಡಿ ಅಧಿಕಾರಿಗಳಿಗೆ ಸಹಾಯಕ ಬೇಕಾದರೆ ನೀಡುತ್ತೇವೆ ಎಂದು ತಿಳಿಸಿದರು.

ಆರೋಪಿಗಳನ್ನ ಪೊಲೀಸ್ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರ ಯಾವುದೇ ಪ್ರಕರಣ ಸಿಐಡಿಗೆ ವಹಿಸಬಹುದು ಎಂದು ರಮೇಶ್ ಬಾನೋತ್ ತಿಳಿಸಿದರು.

Key words: Santro Ravi -case – CID -Mysore -Police –Commissioner- Ramesh Banoth.