ಬೆಳಗಾವಿಯಲ್ಲಿ ಮತ್ತೆ ಎಂಇಎಸ್ ಪುಂಡಾಟ: ನಾಡದ್ರೋಹಿ ಘೋಷಣೆ.

ಬೆಳಗಾವಿ,17,2023(www.justkannada.in):  ಬೆಳಗಾವಿಯಲ್ಲಿ ಎಂಇಎಸ್ ಮತ್ತೆ ಪುಂಡಾಟ ಪ್ರದರ್ಶಿಸಿದ್ದು ನಾಡದ್ರೋಹಿ ಘೋಷಣೆ ಮಾಡಿದ್ದಾರೆ.

ಎಂಇಎಸ್ ವತಿಯಿಂದ ಬೆಳಗಾವಿಯ ಹುತಾತ್ಮ ಚೌಕ್ ನಲ್ಲಿ  ಹುತಾತ್ಮರ ದಿನಾಚಾರಣೆ ಆಚರಿಸಲಾಯಿತು. ಮೆರವಣಿಗೆ ವೇಳೆ ಎಂಇಎಸ್ ಪುಂಡರು ನಾಡದ್ರೋಹಿ ಘೋಷಣೆ ಮಾಡಿದ್ದಾರೆ.

ಬೆಳಗಾವಿ ಖಾನಾಪುರ ನಿಪ್ಪಾಣಿ, ಬೀದರ್ ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಬೇಕು. ಇದ್ರೆ ಮಹಾರಾಷ್ಟ್ರದಲ್ಲಿ ಇಲ್ಲದಿದ್ರೆ ಜೈಲಿನಲ್ಲಿ ಎಂದು ಘೋಷಣೆ ಮಾಡಿದ್ದು, ಈ ವೇಳೆ ಎಂಇಎಸ್ ಅಧ್ಯಕ್ಷ ದೀಪಕ್ ದಳವಿ, ಶುಭಂ ಶೆಳಕೆ ಭಾಗಿಯಾಗಿದ್ದರು.

Key words: MES- strike- again -Belgaum