ಇಂದಿನಿಂದ ಸಂಕಲ್ಪಯಾತ್ರೆ ಆರಂಭ: ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಕ್ರಮ- ಸಿಎಂ ಬಸವರಾಜ ಬೊಮ್ಮಾಯಿ.

Promotion

ಬೆಂಗಳೂರು,ಅಕ್ಟೋಬರ್,11,2022(www.justkannada.in):  ಇಂದಿನಿಂದ ನಮ್ಮ ಸಂಕಲ್ಪಯಾತ್ರೆ ಆರಂಭವಾಗುತ್ತಿದ್ದು, ಮತ್ತೆ ಬಿಜೆಪಿಯನ್ನಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಜನಸಂಕಲ್ಪಯಾತ್ರೆ ಮೂಲಕ ಜನರ ವಿಶ್ವಾಸವನ್ನ ಗಳಿಸಿ ರಾಜ್ಯದಲ್ಲಿ ಮತ್ತೆ ನಮ್ಮ ಪಕ್ಷವನ್ನ ಅಧಿಕಾರಕ್ಕೆ ತರುತ್ತೇವೆ. ಬಿಜೆಪಿ ನಿರಂತರವಾಗಿ ಜನಪರ ಕೆಲಸ ಮಾಡಿಕೊಂಡು ಬಂದಿದೆ. ಈ ಯಾತ್ರೆ ಉದ್ದೇಶ ನಮ್ಮ ಯೋಜನೆ ಜನರಿಗೆ ತಿಳಿಸುವುದು.  ಪಕ್ಷದ ಕಾರ್ಯಕರ್ತರನ್ನ ಸಜ್ಜುಗೊಳಿಸಲು ಈ ಯಾತ್ರೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಗಂಧದಗುಡಿ ಪ್ರಿರಿಲೀಸ್ ಇವೆಂಟ್ ಗೆ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿಯವರು ಬಂದು ಆಹ್ವಾನಿಸಿದ್ದಾರೆ ಎಂದರು.

Key words: Sankalpayatra -starts –from- today-CM-Basavaraja Bommai.