ಸಂಚಾರಿ ನಿಯಮ ಉಲ್ಲಂಘಿಸಿದ ತಪ್ಪಿಗೆ 2 ಸಾವಿರ ದಂಡ ಕಟ್ಟಿ, ಕ್ಷಮೆ ಕೋರಿದ ಸಂಜನಾ

Promotion

ಬೆಂಗಳೂರು, ಫೆಬ್ರವರಿ 04, 2020 (www.justkannada.in): ಕಾರು ಚಾಲನೆ ಮಾಡುತ್ತಿದ್ದ ವೇಳೆ ಮೊಬೈಲ್ ಬಳಸಿ ಸೆಲ್ಫಿ ವಿಡಿಯೋ ಮಾಡಿದ್ದ ನಟಿ ಸಂಜನಾಗೆ ಬೆಂಗಳೂರಿನ ಉಪ್ಪಾರಪೇಟೆ ಟ್ರಾಫಿಕ್ ಪೊಲೀಸರು ನೋಟಿಸ್ ನೀಡಿದ್ದರು.

ಈ ತಪ್ಪನ್ನು ಸಮರ್ಥಿಸಿಕೊಂಡಿದ್ದ ನಟಿ, ನಾನು ಮಾಡಿದ್ದು ತಮಾಷೆಗಾಗಿ ಎಂದಿದ್ದರು. ಇದೀಗ, ಕೊನೆಗೂ ಮಾಡಿದ ತಪ್ಪಿಗೆ ದಂಡ ಕಟ್ಟಿ ಪೊಲೀಸರ ಬಳಿ ಕ್ಷಮೆ ಕೇಳಿದ್ದಾರೆ.

ಬೆಂಗಳೂರು ಸಂಚಾರ ವಿಭಾಗದ ಜಂಟಿ ಆಯುಕ್ತರ ಕಚೇರಿಯಲ್ಲಿಂದು ನಟಿ ಸಂಜನಾ 2000 ರೂಪಾಯಿ ದಂಡ ಪಾವತಿಸಿದ್ದಾರೆ. ”ಇನ್ನು ಮುಂದೆ ನಾನು ಸಂಚಾರಿ ನಿಯಮ ಉಲ್ಲಂಘಿಸುವುದಿಲ್ಲ, ಕ್ಷಮಿಸಿ…” ಎಂದು ಬರವಣಿಗೆಯಲ್ಲಿ ಕ್ಷಮೆ ಕೇಳಿದ್ದಾರೆ.