ಟೆನಿಸ್ ಅಂಗಳಕ್ಕೆ ಮರಳಿದ ಸಾನಿಯಾ! ನಾಳೆ ಮೊದಲ ಡಬಲ್ಸ್ ಪಂದ್ಯ

Promotion

ಹೋಬರ್ಟ್, ಜನವರಿ 13, 2019 (www.justkannada.in): ಭಾರತದ ತಾರಾ ಆಟಗಾರ್ತಿ ಸಾನಿಯಾ ಮಿರ್ಜಾ ಸ್ಪರ್ಧಾತ್ಮಕ ಟೆನಿಸ್‌ಗೆ ಮರಳಿದ್ದಾರೆ.

ಜ. 14ರಂದು ಹೋಬರ್ಟ್‌ ಇಂಟರ್‌ನ್ಯಾಶನಲ್‌ ಟೆನಿಸ್‌ ಕೂಟದ ಡಬಲ್ಸ್‌ನಲ್ಲಿ ಅವರು ಉಕ್ರೇನಿನ ನಾದಿಯಾ ಕಿಚೆನಾಕ್‌ ಜತೆ ಗೂಡಿ ಡಬಲ್ಸ್‌ನಲ್ಲಿ ಸೆಣಸಲಿದ್ದಾರೆ. ತಾಯಿಯಾದ ಬಳಿಕ ಸಾನಿಯಾ ಪಾಲ್ಗೊಳ್ಳುತ್ತಿರುವ ಮೊದಲ ವಿದೇಶಿ ಟೆನಿಸ್‌ ಪಂದ್ಯಾವಳಿ ಇದಾಗಿದೆ.

ಯಾವುದೇ ಶ್ರೇಯಾಂಕ ಹೊಂದಿಲ್ಲದ ಸಾನಿಯಾ ಮಿರ್ಜಾ- ನಾದಿಯಾ ಕಿಚೆನಾಕ್‌ ಮೊದಲ ಸುತ್ತಿನಲ್ಲಿ ಜಾರ್ಜಿಯಾದ ಓಕ್ಸಾನಾ ಕಲಾಶಿಂಕೋವಾ-ಜಪಾನಿನ ಮಿಯು ಕಾಟೊ ಅವರನ್ನು ಎದುರಿಸಲಿದ್ದಾರೆ.